ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜು
ಈ ತಿಂಗಳ 28ರಂದು ನಡೆಯಲಿರುವ ರಾಜ್ಯದ 7 ಮಹಾನಗರ ಪಾಲಿಕೆ ಸೇರಿದಂತೆ 208 ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಎಲ್ಲಾ ಪ್ರಮುಖರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ.

ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಪ್ರತ್ಯೇಕವಾಗಿ ಚುನಾವಣೆಯನ್ನು ಎದುರಿಸಲಿವೆ. ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದು, ಪಕ್ಷದ ಪ್ರಚಾರದಲ್ಲಿ ತೊಡಗಿದ್ದಾರೆ.

ಬುಧವಾರ ಬನಶಂಕರಿ ದೇವಸ್ಥಾನಕ್ಕೆ ಬೇಟಿ ನೀಡಿದ ಅವರು ಬಾಗಲಕೋಟೆಯ ನವನಗರದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಬಿಜೆಪಿ ಸಹಾ ಚುನಾವಣೆಗೆ ಸಜ್ಜಾಗುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಸಚಿವರು, ಶಾಸಕರು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ತಿಳಿಸಿದ್ದಾರೆ.

ಮತಗಟ್ಟೆ ಮಟ್ಟದ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದ್ದು, ಚುನಾವಣಾ ಸಮರವನ್ನು ಎದುರಿಸಲು ಜಿಲ್ಲಾ ಘಟಕಗಳಿಗೆ ಎಲ್ಲ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
ಮತ್ತಷ್ಟು
ಹೈದರಾಬಾದ್ ಸ್ಪೋಟ : ಮಂಪರು ಪರೀಕ್ಷೆ
ಪರಿಹಾರ ಕಾಣದ ಶಿಕ್ಷಕರ ಸಮಸ್ಯೆ
ಸುದ್ದಿಯಲ್ಲಿ ಮತ್ತೆ ನಕ್ಸಲರು
ರಂಗೇರಿದ ಕೆಎಸ್ಸಿಎ ಚುನಾವಣೆ
ಬೆಳಗಾವಿ: ಎನ್‌‌ಕೌಂಟರ್‌ಗೆ ಶಿಂತ್ರೆ ಬಲಿ
ಕುರುಬರಿಗೆ ಸಿಎಂ ಕಿರುಕುಳ: ವಿಶ್ವನಾಥ್