ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮೈತ್ರಿ:ದಿಕ್ಕು ತೋಚದ ಬಿಜೆಪಿ ನಾಯಕರು
ಸಮ್ಮಿಶ್ರ ಸರ್ಕಾರದ ಅಧಿಕಾರ ಹಸ್ತಾಂತರ ಕುರಿತಂತೆ ಜೆಡಿಎಸ್ ಮುಖಂಡರು ದಿನಕ್ಕೊಂದು ಘಳಿಗೆಗೊಂದು ಹೇಳಿಕೆಗಳನ್ನು ನೀಡುತ್ತಿರುವುದರಿಂದ ಬಿಜಪಿ ನಾಯಕರಿಗೆ ದಿಕ್ಕೇ ತೋಚದಂತಾಗಿದೆ.

ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವೆ ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಆಗಲಿದೆ ಎಂದು ಇಲ್ಲಿಯವರೆಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದರು.

ಆದರೆ ಈಗ ಜೆಡಿಎಸ್ ವರಿಷ್ಠ ದೇವೇಗೌಡರು ವರಸೆ ಬದಲಾಯಿಸಿದ್ದಾರೆ. ಬಿಜೆಪಿಗೆ ಹೇಗೆ ಹೈಕಮಾಂಡ್ ಇದೆಯೊ ಹಾಗೆ ಜೆಡಿಎಸ್ಗೂ ಹೈಕಮಾಂಡ್ ಇದ್ದು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಮತ್ತೊಂದು ಬಾಂಬ್ ಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಪ್ರವಾಸದಲ್ಲಿರುವ ದೇವೇಗೌಡ ಅವರನ್ನು ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡಿದಾಗ ಅಧಿಕಾರ ಹಸ್ತಾಂತರ ಕುರಿತ ಪ್ರಶ್ನೆಗಳಿಗೆ ಸ್ಷಷ್ಟ ಉತ್ತರ ನೀಡದ ಗೌಡರು ಮತ್ತೆ ಗೊಂದಲ ಹುಟ್ಟುಹಾಕಿದ್ದಾರೆ.

ಅಧಿಕಾರ ಹಸ್ತಾಂತರ ಕುರಿತ ಸಮಸ್ಯೆ ಎದುರಾದಾಗ ರಾಜ್ಯ ಬಿಜೆಪಿ ಮುಖಂಡರು ದೆಹಲಿಗೆ ತೆರಳಿ ಅವರ ಪಕ್ಷದ ವರಿಷ್ಠರಾದ ವಾಜಪೇಯಿ, ಅಡ್ವಾಣಿ ಮುಂತಾದವರನ್ನು ಸಂಪರ್ಕಿಸಿ ಸಲಹೆ ಪಡೆಯುವಂತೆ ತಾವೂ ಸಹಾ ಪಕ್ಷದ ಮುಖಂಡರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಒಗಟಾದ ಉತ್ತರ ನೀಡಿದ್ದಾರೆ.
ಮತ್ತಷ್ಟು
ಆತಂಕ ಸೃಷ್ಟಿಸಿರುವ ಸರಕಾರದ ಮೈತ್ರಿ
ಮಿರಾಜ್ ವಾಗ್ದಾಳಿಗೆ ನಾಯ್ಡು ಖಂಡನೆ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜು
ಹೈದರಾಬಾದ್ ಸ್ಪೋಟ : ಮಂಪರು ಪರೀಕ್ಷೆ
ಪರಿಹಾರ ಕಾಣದ ಶಿಕ್ಷಕರ ಸಮಸ್ಯೆ
ಸುದ್ದಿಯಲ್ಲಿ ಮತ್ತೆ ನಕ್ಸಲರು