ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವಿದ್ಯೂತ್ : ತಮಿಳುನಾಡು ಕ್ಯಾತೆ
ಕಾವೇರಿ ನೀರಿಗಾಗಿ ಕರ್ನಾಟಕ ಹಾಗೂ ತಮಿಳನಾಡು ನಡುವಣ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರೆದರೂ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ನೂತನ ಕಾವೇರಿ ಜಲ ವಿದ್ಯುತ್ ಯೋಜನೆಗಳಿಂದ ಉತ್ಪತ್ತಿಯಾಗುವ ವಿದ್ಯುತ್ನಲ್ಲಿ ತನಗೆ ಪಾಲು ಕೊಡಿಸಬೇಕು ಎಂದು ತಮಿಳುನಾಡು ಕೇಂದ್ರ ಸರ್ಕಾರಕ್ಕೆ ಮೊರೆ ಇಟ್ಟಿದೆ.

ತಮಿಳುನಾಡು ಒತ್ತಾಯಕ್ಕೆ ಮೊದಲಿಂದಲೂ ಮಣಿಯುತ್ತಲೇ ಬಂದಿರುವ ಕೇಂದ್ರ ಸರ್ಕಾರ ತಮಿಳುನಾಡಿನ ಮನವಿಯನ್ನು ಪುರಸ್ಕರಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ. ಇಲ್ಲದ ಬಿಕ್ಕಟ್ಟು ಪರಿಹರಿಸಲು ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾರ್ಯದರ್ಶಿಗಳ ಸಭೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಇನ್ನು 15 ದಿನಗಳಲ್ಲಿ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಯಲಿದೆ ಎಂದು ಕೇಂದ್ರ ವಿದ್ಯುತ್ ಇಲಾಖೆ ಕಾರ್ಯದರ್ಶಿ ಅನಿಲ್ ರಜ್ವಾನ್ ತಿಳಿಸಿದ್ದಾರೆ.

ಇದು ಕರ್ನಾಟಕ ಜನತೆಯನ್ನು ರೊಚ್ಚಿಗೆಬ್ಬಿಸುವ ತಂತ್ರವಾಗಿದ್ದು, ಈಗಾಗಲೆ ಕನ್ನಡ ಪರ ಸಂಘಟನೆಗಳು ಹಾಗೂ ನಾಡು ನುಡಿಗಾಗಿ ಹೋರಾಟದಲ್ಲಿ ತೊಡಗಿರುವ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗುತ್ತಿವೆ.
ಮತ್ತಷ್ಟು
ಕೊಟ್ಟ ಮಾತಿಗೆ ತಪ್ಪುವುದಿಲ್ಲ : ಕುಮಾರಸ್ವಾಮಿ
ಮೈತ್ರಿ:ದಿಕ್ಕು ತೋಚದ ಬಿಜೆಪಿ ನಾಯಕರು
ಆತಂಕ ಸೃಷ್ಟಿಸಿರುವ ಸರಕಾರದ ಮೈತ್ರಿ
ಮಿರಾಜ್ ವಾಗ್ದಾಳಿಗೆ ನಾಯ್ಡು ಖಂಡನೆ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜು
ಹೈದರಾಬಾದ್ ಸ್ಪೋಟ : ಮಂಪರು ಪರೀಕ್ಷೆ