ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರೇವಣ್ಣ, ಯಡಿಯೂರಪ್ಪ ಭೇಟಿ
ಅಧಿಕಾರ ಹಸ್ತಾಂತರ ಸಮೀಪಿಸುತ್ತಿದ್ದಂತೆ ತಂತ್ರ, ಪ್ರತಿತಂತ್ರಗಳಿಗೇನೂ ಕೊರತೆ ಇಲ್ಲ. ರಾಜ್ಯಾಡಳಿತದ ನೇತೃತ್ವ ತಮ್ಮ ಪಕ್ಷದಬಳಿಯೇ ಇರಬೇಕೆಂಬ ಆಶಯದೊಂದಿಗೆ ಜೆಡಿಎಸ್ ಮುಖಂಡರ ಕಸರತ್ತು ಆರಂಭವಾಗಿದೆ.

ಬುಧವಾರ ಇಂಧನ ಸಚಿವ ರೇವಣ್ಣ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಯಾಗಿ ಸಮಾಲೋಚನೆ ನಡೆಸಿದ ಘಟನೆಯಿಂದ ರಾಜಕೀಯ ವಲಯದಲ್ಲಿ ಲೆಕ್ಕವಿಲ್ಲದಷ್ಟು ಊಹಾಪೋಹಗಳು ಹುಟ್ಟಿಕೊಂಡಿವೆ.

ಇವರಿಬ್ಬರ ನಡುವೆ ಯಾವ ರಾಜಕೀಯ ವಿಷಯ ಕುರಿತು ಚರ್ಚೆ ನಡೆದಿಲ್ಲ ಎಂಬ ಹೇಳಿಕೆಗಳು ಉಭಯ ನಾಯಕರಿಂದ ಹೊರಬಿದ್ದರೂ ರಾಜಕೀಯ ವಿಶ್ಲೇಷಕರು ಮಾತ್ರ ಇದನ್ನು ಒಪ್ಪಲು ತಯಾರಿಲ್ಲ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲೇ ಸರ್ಕಾರ ಮುಂದುವರೆಯಬೇಕು, ತಮ್ಮ ಬಳಿ ಇರುವ ಲೋಕೋಪಯೋಗಿ ಹಾಗೂ ಇಂಧನ ಖಾತೆಗಳು ತಮ್ಮ ಬಳಿಯೇ ಇರಬೇಕು ಎಂದು ರೇವಣ್ಣ ರಾಜಕೀಯ ಒಪ್ಪಂದದ ಪೀಠಿಕೆಯನ್ನು ಹಾಕಿದ್ದು, ಅದಕ್ಕೆ ಪ್ರತಿಯಾಗಿ ಹಣಕಾಸು ಇಲಾಖೆ ತಮ್ಮ ಬಳಿ ಇರಬೇಕು ಎಂಬ ವಾದವನ್ನು ಯಡಿಯೂರಪ್ಪ ಮಂಡಿಸಿದರು ಎಂದು ಹೇಳಲಾಗಿದೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ತಿಂಗಳ 18 ರಂದು ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆಂದು ವದಂತಿಗಳು ಹಬ್ಬಿವೆ.
ಮತ್ತಷ್ಟು
ವಿದ್ಯೂತ್ : ತಮಿಳುನಾಡು ಕ್ಯಾತೆ
ಕೊಟ್ಟ ಮಾತಿಗೆ ತಪ್ಪುವುದಿಲ್ಲ : ಕುಮಾರಸ್ವಾಮಿ
ಮೈತ್ರಿ:ದಿಕ್ಕು ತೋಚದ ಬಿಜೆಪಿ ನಾಯಕರು
ಆತಂಕ ಸೃಷ್ಟಿಸಿರುವ ಸರಕಾರದ ಮೈತ್ರಿ
ಮಿರಾಜ್ ವಾಗ್ದಾಳಿಗೆ ನಾಯ್ಡು ಖಂಡನೆ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜು