ಬೆಂಗಳೂರು-ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ ಬಳಿ ಇರುವ ಅಕ್ರಮ ವಾಣಿಜ್ಯ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯಾಚರಣೆ ಗುರುವಾರ ಭರದಿಂದ ಸಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯ ಮುಂದುವರೆದಿದೆ. ಇದೇರೀತಿ ಮೈಸೂರು ರಸ್ತೆಯಲ್ಲಿ ಅಕ್ರಮ ಒತ್ತುವರಿಯನ್ನು ತೆರವು ಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಯಂಡಹಳ್ಳಿಯಲ್ಲಿ ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡ ಭವನಗಳನ್ನು ನೆಲಸಮ ಗೊಳಿಸಲು 2005ರಲ್ಲಿ ಸರ್ಕಾರ ಮುಂದಾಗಿತ್ತು.
ಆಗ ಕಟ್ಟಡಗಳ ಮಾಲೀಕರು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ನಂತರ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿತ್ತು. ನಂತರ ಸರ್ಕಾರ ನೀಡಿದ ನೋಟೀಸ್ಗೆ ಕಟ್ಟಡಗಳ ಮಾಲಿಕರು ಉತ್ತರ ನೀಡಿರಲಿಲ್ಲ.
ಹಾಗಾಗಿ ತೆರವು ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಎಂ.ಸಾದಿಕ್ ಸುದ್ದಿಗಾರರಿಗೆ ತಿಳಿಸಿದರು.
|