ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಚುನಾವಣೆಗೆ ಮುನ್ನ ಅಧಿಕಾರಿಗಳ ವರ್ಗಾವಣೆ: ಸರ್ಕಾರಕ್ಕೆ ಪತ್ರ
ರಾಜ್ಯದಲ್ಲಿ ಸ್ಥಳೀಯ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಕೆಲ ಗಂಟೆಗಳ ಮುನ್ನ ರಾಜ್ಯ ಸರ್ಕಾರ 61 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿಬಿ ಮಹೇಶ್ ಅವರಿಗೆ ಪತ್ರ ಜಾರಿಮಾಡಿದೆ.

ಮಂಗಳವಾರ ಚುನಾವಣಾ ನೀತಿ ಸಂಹಿತ ಜಾರಿಗೆ ಬಂದಿದ್ದರಿಂದ ಈ ವರ್ಗಾವಣೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಈ ಹಿನ್ನಲೆಯಲ್ಲಿ ವರ್ಗಾವಣೆಗೆ ವಿವರಣೆ ನೀಡುವಂತೆ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ರಾಜ್ಯ ಚುನಾವಣಾ ಆಯುಕ್ತ ಎಂ.ಆರ್.ಹೆಗ್ಡೆ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಎಚ್.ಹನುಮಂತಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗಕ್ಕೆ ಅಧಿಕಾರಿಗಳ ವರ್ಗಾವಣೆ ವಿರುದ್ಧ ಮನವಿಸಲ್ಲಿಸಿದ್ದರು.
ಮತ್ತಷ್ಟು
ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ
ರೇವಣ್ಣ, ಯಡಿಯೂರಪ್ಪ ಭೇಟಿ
ವಿದ್ಯೂತ್ : ತಮಿಳುನಾಡು ಕ್ಯಾತೆ
ಕೊಟ್ಟ ಮಾತಿಗೆ ತಪ್ಪುವುದಿಲ್ಲ : ಕುಮಾರಸ್ವಾಮಿ
ಮೈತ್ರಿ:ದಿಕ್ಕು ತೋಚದ ಬಿಜೆಪಿ ನಾಯಕರು
ಆತಂಕ ಸೃಷ್ಟಿಸಿರುವ ಸರಕಾರದ ಮೈತ್ರಿ