ವಿದ್ಯಾರ್ಥಿಗಳಿಗೆ ಜಾರಿಗೊಳಿಸುತ್ತಿರುವ ಸ್ಮಾರ್ಟ್ ಕಾರ್ಡ್ ರೀತಿಯಲ್ಲೇ ಬಹು ಉಪಯೋಗಿ ಸ್ಮಾರ್ಟ್ ಕಾರ್ಡ್‌ಗಳನ್ನು ಸದ್ಯದಲ್ಲೇ ಜಾರಿಗೊಳಿಸುವುದಾಗಿ ಸಾರಿಗೆ ಸಚಿವ ಚೆಲುವರಾಯಸ್ವಾಮಿ ಶುಕ್ರವಾರ ತಿಳಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊಬೈಲ್ ರೀಚಾರ್ಜ್ ಕಾರ್ಡ‌್‌ಗಳನ್ನು ಬಳಸಿದ ರೀತಿಯಲ್ಲೇ ಈ ಕಾರ್ಡ‌್‌ಗಳನ್ನು ಬಳಸಬಹುದಾಗಿದ್ದು, ಡೆಬಿಟ್ ಕಾರ್ಡ್ಆಗಿ, ಜಲಮಂಡಳಿ ಬಿಲ್ಲು ಪಾವತಿಗೆ, ಹೀಗೆ ಹತ್ತು ಹಲವು ರೀತಿ ಈ ಕಾರ್ಡ್ ಉಪಯೋಗಿಸಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್‌ಗಳಲ್ಲಿ ಬಳಸುವ ಎಲೆಕ್ಟ್ರಾನಿಕ್ ಯಂತ್ರಗಳ ರೀತಿಯಲ್ಲೇ ಈ ಸ್ಮಾರ್ಟ್ ಕಾರ್ಡ‌್‌ಗಳನ್ನು ವಿತರಿಸಬಹುದಾಗಿದ್ದು, ಮೊದಲ ಹಂತದಲ್ಲಿ ಹತ್ತು ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
|