ಕನ್ನಡ ಭಾಷೆ, ನಾಡಿನ ಜಲ, ನೆಲಕ್ಕಾಗಿ ಕಳೆದ ಹಲವು ದಶಕಗಳಿಂದ ಹೋರಾಟ ನಡೆಸುಕೊಂಡು ಬರುತ್ತಿರುವ ವಾಟಾಳ್ ನಾಗರಾಜ್ ಶುಕ್ರವಾರ ತಮ್ಮ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡರು.
ತಮ್ಮ ಜನ್ಮದಿನ ಬೇರೇ ಆಗಿದ್ದರೂ ಹೋರಾಟದ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್‌ನಿಂದ ಬೂಟಿನೇಟು ತಿಂದ ಸೆಪ್ಟೆಂಬರ್ 7ರನ್ನೇ ತಮ್ಮ ಹುಟ್ಟು ಹಬ್ಬವಾಗಿ ಅವರು ಆಚರಿಸಿಕೊಂಡು ಬಂದಿದ್ದಾರೆ.
ಅದೇ ರೀತಿ ತಮ್ಮ ಹೋರಾಟದ ನೆನಪುಗಳನ್ನು ಬಿಚ್ಚಿಟ್ಟ ಅವರು ಅಲಂಕಾರ್ ಚಿತ್ರಮಂದಿರದಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕಾಗಿ ಹೋರಾಟ ನಡೆಸಿದ್ದ ತಮ್ಮನ್ನು ಲೂಯಿಸ್ ಎಂಬ ಇನ್ಸ್ಪೆಕ್ಟರ್ ಬಂಧಿಸಿ ಉಪ್ಪಾರಪೇಟೆಗೆ ಕರೆದೊಯ್ದು ಬೂಟಿನಿಂದ ಹೊಡೆದರು ಎಂದು ವಾಟಾಳ್ ಹೇಳಿದರು.
ತಾವು ಅಂದಿನಿಂದ ಈ ದಿನವನ್ನೇ ತಮ್ಮ ಜನ್ಮದಿನವನ್ನಾಗಿ ಆಚರಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.
ತಾವು 1972ರಲ್ಲಿ 18 ಸಾವಿರ ರೂ.ಗಳಿಗೆ ಖರೀದಿಸಿದ ಫಿಯಟ್ ಕಾರಿನ ಮೇಲೆ ತಮಗಿರುವಅಕ್ಕರೆಯನ್ನು ತೋರಿಸಿದ ಅವರು ಮುಂದಿನ ವರ್ಷದಿಂದ ಅದರ ಜನ್ಮದಿನವನ್ನೂ ಸಹಾ ತಮ್ಮ ಜನ್ಮ ದಿನವನ್ನಾಗಿ ಆಚರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
|