ಅಕ್ಟೋಬರ್ 12 ರಿಂದ 21ರ ವರೆಗೆ ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗುರುವಾರ ನಾಗರಹೊಳೆ ಅಭಯಾರಣ್ಯದ ವೀರನ ಹೊಸಹಳ್ಲಿಯಿಂದ ಹೊರಟ ಗಜರಾಜ ಬಲರಾಮ ನೇತೃತ್ವದ ಆನೆಗಳ ತಂಡ ಶುಕ್ರವಾರ ಮೈಸೂರಿಗೆ ಆಗಮಿಸಿದೆ.
ಒಟ್ಟು ಆರು ಆನೆಗಳುಳ್ಳ ಈ ಆನೆಗಳ ತಂಡವನ್ನು ಮೈಸೂರಿನಲ್ಲಿ ಸಾಂಪ್ರದಾಯಕವಾಗಿ ಭವ್ಯರೀತಿಯಲ್ಲಿ ಸ್ವಾಗತಿಸಲಾಯಿತು.
ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಚಿವ ಮಹದೇವಪ್ರಸಾದ್ ಅವರು ಸೇರಿದಂತೆ ಸ್ಥಳೀಯ ಮುಖಂಡರು, ಅಧಿಕಾರಿಗಳು ಸ್ವಾಗತಿಸಿದರು.
ದಸರಾ ಅಂಗವಾಗಿ ವಿಜಯದಶಮಿಯಂದು ಜಂಬೂ ಸವಾರ ನಡೆಯಲಿದ್ದು, ಸಂಪ್ರದಾಯದಂತೆ ಗಜರಾಜ ಬಲರಾಮ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾನೆ.
|