ಸಿಲಿಕಾನ್ ಸಿಟಿ, ಹೈಟೆಕ್ ಸಿಟಿ, ಪೆನ್ಷನರ್ಸ್ ಪ್ಯಾರಡೈಜ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಂಗಳೂರು ನಗರಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದೆ. ಉದ್ದಿಮೆ ಸ್ಥಾಪನೆಗೆ ಜಗತ್ತಿನಲ್ಲೇ ಅತ್ಯುತ್ತಮ ಎನಿಸಿಕೊಂಡ ಹೆಮ್ಮೆಯ ನಗರಗಳ ಸಾಲಿಗೆ ಬೆಂಗಳೂರು ಸೇರ್ಪಡೆಯಾಗಿದೆ. ಅಂತಾರಾಷ್ಟ್ತ್ರೀಯ ಔದ್ಯೌಗಿಕ ವಲಯದಲ್ಲಿ ಲಂಡನ್, ಸಿಂಗಾಪುರ ಶಾಂಘೈ ಮುಂತಾದ 12 ನಗರಗಳ ಸಾಲಿಗೆ ಬೆಂಗಳೂರು ಸೇರ್ಪಡೆ ಯಾಗಿದೆ.
ಸಿಎನ್ಎನ್-ಟೈಮ್ ವಾರ್ನರ್ ಸಮೂಹ ಪ್ರಕಟಿಸುವ ಬಿಸಿನೆಸ್-20 ನಿಯಕಾಲಿಗೆ ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಸಮೀಕ್ಷೆಯೊಂದನ್ನು ನಡೆಸಿದ್ದು, ಆ ಸಮೀಕ್ಷೆಯ ಆಧಾರದ ಮೇಲೆ ಉದ್ದಿಮೆಗಳ ಸ್ಥಾಪನೆಗೆ ಅನುಕೂಲಕರ ನಗರಗಳ ಪಟ್ಟಯಲ್ಲಿ ಬೆಂಗಳೂರು ನಗರ ನಾಲ್ಕನೆಯ ಸ್ಥಾನ ಪಡೆದಿದೆ.
|