ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶನಿವಾರ ಮತ್ತೊಂದು ಬಾಂಬ್ ಎಸೆದಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾದ ಬಿಜೆಪಿ ತಮ್ಮ ಕುಟುಂಬದ ವಿರುದ್ಧ ಮಾಡಿದ ಆರೋಪಗಳು ನೀಡಿದ ಕಿರುಕುಳದ ಬಗ್ಗೆ ಆ ಪಕ್ಷದ ಹಿರಿಯ ಮುಖಂಡರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿಯವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಪತ್ರ ಬರೆಯುವುದರ ಜತೆಗೆ ತಾವು ದೆಹಲಿಗೆ ತೆರಳಿ ಖುದ್ದಾಗಿ ಅವರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಸಚಿವ ಶ್ರೀರಾಮುಲು ಬಳ್ಳಾರಿ ಎಸ್ಪಿ ವರ್ಗಾವಣೆ ವಿಚಾರದಲ್ಲಿ ಮಾಡಿದ ರಂಪಾಟ ಹಾಗೂ ತಮ್ಮ ಕುಟುಂಬಕ್ಕೆ ಅಪಮಾನ ಮಾಡಿದ್ದಾರೆ ಹಾಗೂ ವಿಧಾನಪರಿಷತ್ ಸದಸ್ಯ ಜನಾರ್ಧನರೆಡ್ಡಿ ಅವರು 150 ಕೋಟಿ ರೂ. ಲಂಚವನ್ನು ಕುಮಾರಸ್ವಾಮಿಗೆ ನೀಡಿದ್ದಾಗಿ ಆರೋಪ ಮಾಡಿದಾಗಲೂ ಬಿಜೆಪಿ ರೆಡ್ಡಿಯನ್ನು ಪಕ್ಷದಿಂದ ಉಚ್ಛಾಟಿಸಿಲ್ಲ ಎಂದು ಟೀಕಿಸಿದ್ದಾರೆ. ಕಳೆದ 19 ತಿಂಗಳಲ್ಲಿ ಬಿಜೆಪಿ ರಾಜಧರ್ಮವನ್ನು ಮುರಿದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
|