ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಧ್ಯಂತರ ಚುನಾವಣೆ: ಮಿತ್ರ ಪಕ್ಷಗಳ ಭಿನ್ನ ಮುಖ
ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಗೊಂದಲಗಳು ಮುಂದುವರಿದಿರುವಂತೆಯೇ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ, ಮಧ್ಯಂತರ ಚುನಾವಣೆ ಕುರಿತು ವಿಭಿನ್ನ ಹೇಳಿಕೆಗಳನ್ನು ನೀಡಿವೆ.

ಮಧ್ಯಂತರ ಚುನಾವಣೆ ಸಂಬಂಧ ಬಿಜೆಪಿ ನೀಡಿರುವ ಹೇಳಿಕೆಗೆ ಉತ್ತರವೆಂಬಂತೆ ವಿಧಾನಸಭೆ ಮಧ್ಯಂತರ ಚುನಾವಣೆಗೆ ಸಿದ್ಧವಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಹೇಳಿದ್ದಾರೆ. ಮಧ್ಯಂತರ ಚುನಾವಣೆ ಎದುರಾದರೆ ತಮಗೆ ಯಾವ ಭಯವೂ ಇಲ್ಲ ಎಂದಿದ್ದಾರೆ.

ಈ ನಡುವೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆಯನ್ನು ಬಿಜೆಪಿ ಸ್ಪಷ್ಟವಾಗಿ ವಿರೋಧಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಹೇಳಿದ್ದಾರೆ.

ಅಧಿಕಾರ ಹಸ್ತಾಂತರಕ್ಕಾಗಿ ಕಾಯುತ್ತಿರುವ ಬಿಜೆಪಿ ಪರವಾಗಿ ಗೌಡರು ಮಧ್ಯಂತರ ಚುನಾವಣೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಬಿಜೆಪಿಯ ಅಜೆಂಡಾ ಅಲ್ಲ, ರಾಜ್ಯದ ಹಿತಾಸಕ್ತಿ ಕಾಪಾಡುವುದೇ ತಮ್ಮ ಸಿಂಗಲ್ ಪಾಯಿಂಟ್ ಅಜೆಂಡಾ ಎಂದಿದ್ದಾರೆ.

ಮೆರಾಜುದ್ದೀನ್ ಪಟೇಲರ ಪ್ರಚೋದನೆಯ ಹೇಳಿಕೆಗಳನ್ನು ಕುರಿತು ಮಾತನಾಡಿದ ಅವರು, ಅವರಿಗೆ ಕನಸಿನಲ್ಲಿಯೂ ಯೋಚಿಸಿರದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಏಕಾಏಕಿ ದೊರೆತಿದೆ. ಆ ಖುಷಿಯಲ್ಲಿ ಅವರು ಸ್ವಲ್ಪ ಉದ್ವೇಗ, ಆವೇಶಕ್ಕೆ ಒಳಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಮತ್ತಷ್ಟು
ಪ್ರತಿಭಾರಿಂದ ಚೆನ್ನಮ್ಮಳ ಪುತ್ಥಳಿ ಅನಾವರಣ
ಕೆಎಸ್ಸಿಎ ಚುನಾವಣೆ: ಒಡೆಯರ್ ಬಣ ಮೇಲುಗೈ
ಸ್ಥಳೀಯ ಚುನಾವಣಾ ವೇಳಾಪಟ್ಟಿ ಪ್ರಕಟ
ಬಿಜೆಪಿಗೆ ಅಧಿಕಾರದ ಕನಸು: ಧರಂಸಿಂಗ್
ದೆಹಲಿಗೆ ಸ್ಥಳಾಂತರಗೊಂಡ ದೋಸ್ತಿಗಳ ಕುಸ್ತಿ
ದೇವೇಗೌಡರಿಂದ ಬಿಜೆಪಿಗೆ ಬಾಂಬ್