ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಚಿತ್ರದುರ್ಗ, ಭಟ್ಕಳದಲ್ಲಿ ಅಪಘಾತ: 13 ಬಲಿ
ಚಿತ್ರದುರ್ಗ-ಮೊಳಕಾಲ್ಮೂರು ರಸ್ತೆಯಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಟಾಟಾ ಸುಮೋ ಮತ್ತು ಅದಿರುತುಂಬಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಾಗ ಆರು ಜನರು ಮೃತಪಟ್ಟಿದ್ದಾರೆ.

ಟಾಟಾ ಸುಮೋದಲ್ಲಿ ಪ್ರಯಾಣಿಸುತ್ತಿದ್ದವರು ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೌಗಿಗಳೆಂದು ತಿಳಿದುಬಂದಿದೆ.

ಭಟ್ಕಳದ ಸಮೀಪ ಸಂಭವಿಸಿದ ಮತ್ತೊಂದು ರಸ್ತೆ ಅಪಘಾತದಲ್ಲಿ, 7 ಜನರು ಸಾವನ್ನಪ್ಪಿದ್ದಾರೆ. ಬಸ್ ಹಾಗೂ ಆಟೋ ನಡುವೆ ಡಿಕ್ಕಿಯ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದರೆ ಆಸ್ಪತ್ರೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು. ಈ ದುರ್ಘಟನೆಯಲ್ಲಿ ಆಟೋ ಚಾಲಕ ಸಾವನ್ನಪ್ಪಿದ್ದು, ಅವರ ಗೌರವಾರ್ಥ ಭಟ್ಕಳದಲ್ಲಿ ಆಟೋ ಸಂಚಾರ ಸ್ಥಗಿತಗೊಳಿಸಲಾಗಿದೆ.

ಮನೆ ಕುಸಿದು ಮೂವರು ಮಹಿಳೆಯರ ಸಾವು: ದಾವಣಗೆರೆಯ ಗ್ರಾಮವೊಂದರಲ್ಲಿ ಮನೆ ಛಾವಣಿ ಕುಸಿದು ಒಂದೇ ಕುಟುಂಬದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರನ್ನು ಹಾಲಮ್ಮ, ಗೀತಮ್ಮ ಹಾಗೂ ಗಂಗಮ್ಮ ಎಂದು ಗುರುತಿಸಲಾಗಿದೆ. ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಒಂದೊಂದು ಲಕ್ಷ ರೂ.ಗಳಂತೆ ಪರಿಹಾರ ಘೋಷಿಸಲಾಗಿದೆ.
ಮತ್ತಷ್ಟು
ಮಧ್ಯಂತರ ಚುನಾವಣೆ: ಮಿತ್ರ ಪಕ್ಷಗಳ ಭಿನ್ನ ಮುಖ
ಪ್ರತಿಭಾರಿಂದ ಚೆನ್ನಮ್ಮಳ ಪುತ್ಥಳಿ ಅನಾವರಣ
ಕೆಎಸ್ಸಿಎ ಚುನಾವಣೆ: ಒಡೆಯರ್ ಬಣ ಮೇಲುಗೈ
ಸ್ಥಳೀಯ ಚುನಾವಣಾ ವೇಳಾಪಟ್ಟಿ ಪ್ರಕಟ
ಬಿಜೆಪಿಗೆ ಅಧಿಕಾರದ ಕನಸು: ಧರಂಸಿಂಗ್
ದೆಹಲಿಗೆ ಸ್ಥಳಾಂತರಗೊಂಡ ದೋಸ್ತಿಗಳ ಕುಸ್ತಿ