ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಾತಿಗೆ ಬದ್ಧ : ಕುಮಾರಸ್ವಾಮಿ ಸ್ಪಷ್ಟನೆ
ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ವಿಶ್ವಾಸಾರ್ಹತೆಗೆ ಬೆಲೆ ಕೊಡುವ ಅಗತ್ಯವಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಅವರು ದೆಹಲಿಯಲ್ಲಿ ಹೇಳಿದ್ದಾರೆ. ಅಧಿಕಾರ ಹಸ್ತಾಂತರ ಕುರಿತು ಜೆಡಿಎಸ್ ತಳೆದಿರುವ ನಿಲುವಿನ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ತಾವು ಬಿಜೆಪಿ ಜತೆ ಸೇರಿ ಸರ್ಕಾರ ರಚನೆಗೆ ಕೈಗೊಂಡ ನಿರ್ಧಾರವನ್ನು ಪಕ್ಷವನ್ನು ಉಳಿಸಲು ಸೂಕ್ತ ನಿರ್ಧಾರ ಎಂದು ಮೆಚ್ಚಲಾಗಿದೆ. ಈಗಲೂ ತಾವು ಕೈಗೊಳ್ಳುವ ನಿರ್ಧಾರ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಹಿತ ಕಾಯುವಂತಹದೇ ಆಗಿರುತ್ತದೆ ಎಂದಿದ್ದಾರೆ.

ದೆಹಲಿಯಲ್ಲೂ ಸಹಾ ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಚಿತ್ರದುರ್ಗ, ಭಟ್ಕಳದಲ್ಲಿ ಅಪಘಾತ: 13 ಬಲಿ
ಮಧ್ಯಂತರ ಚುನಾವಣೆ: ಮಿತ್ರ ಪಕ್ಷಗಳ ಭಿನ್ನ ಮುಖ
ಪ್ರತಿಭಾರಿಂದ ಚೆನ್ನಮ್ಮಳ ಪುತ್ಥಳಿ ಅನಾವರಣ
ಕೆಎಸ್ಸಿಎ ಚುನಾವಣೆ: ಒಡೆಯರ್ ಬಣ ಮೇಲುಗೈ
ಸ್ಥಳೀಯ ಚುನಾವಣಾ ವೇಳಾಪಟ್ಟಿ ಪ್ರಕಟ
ಬಿಜೆಪಿಗೆ ಅಧಿಕಾರದ ಕನಸು: ಧರಂಸಿಂಗ್