ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕ ಪಿ.ಜಿ.ಆರ್. ಸಿಂಧ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಲು ನೆಪಕ್ಕಾಗಿ ಕಾಯುತ್ತಿದ್ದ ಜೆಡಿಎಸ್, ಈಗ ಅದಕ್ಕೆ ಮುಹೂರ್ತವನ್ನು ಸಿದ್ಧಪಡಿಸಿದೆ.
ಪಕ್ಷದ ಸಂವಿಧಾನ ಪ್ರಕಾರ ಸಿಂಧ್ಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ತಿಳಿಸಿದ್ದಾರೆ.
ಸಿಂಧ್ಯ ಬಹುಜನ ಸಮಾಜ ಪಕ್ಷದ ಜತೆ ಕೈಜೋಡಿಸುತ್ತಿದ್ದಾರೆ ಎಂದು ವರದಿಗಳು ಬಂದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಅವರ ಉಚ್ಚಾಟನೆಗೆ ನಿರ್ಧಾರ ಪ್ರಕಟಿಸಲಿರುವುದಾಗಿ ಮೆರಾಜುದ್ದೀನ್ ತಿಳಿಸಿದ್ದಾರೆ.
ಬಿಎಸ್ಪಿಗೆ ಸೇರಲು ಸಜ್ಜಾಗಿರುವ ಸಿಂಧ್ಯ ಅವರು ಸ್ಥಳೀಯ ಸಂಸ್ಥೆ ಚುನಾವಣೆಗೆ ಆನೇಕಲ್‌ನಿಂದ ಪ್ರಚಾರ ಕಾರ್ಯ ಆರಂಭಿಸಲು ನಿರ್ಧರಿಸಿದ್ದಾರೆ.
|