ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಾಂಬ್ ಬೆದರಿಕೆ : ವಿಧಾನ ಸೌಧ ಪರಿಶೀಲನೆ
NRB
ವಿಧಾನ ಸೌಧಕ್ಕೆ ಬಾಂಬ್ ಇಡಲಾಗಿದೆ ಎಂಬ ಅನಾಮಿಕ ಕರೆ ಹಿನ್ನೆಲೆಯಲ್ಲಿ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಲೋಹ ಪರಿಶೋಧಕದ ಮೂಲಕ ಬಾಂಬ್ ಇಟ್ಟಿರುವ ಬಗ್ಗೆ ತೀವ್ರ ಹುಡುಕಾಟ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸ್ಥಳಕ್ಕೆ ಆಗಮಿಸಿ ವಿಧಾನ ಸೌಧದ ಸುತ್ತೆಲ್ಲಾ ಬಾಂಬ್ ಇಡಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿತು.

ವಿಧಾನ ಸೌಧಕ್ಕೆ ಬಾಂಬ್ ಇಡಲಾಗಿದೆ ಎಂದು ರಾಜೇಶ್ ಎಂಬ ಹೆಸರಿನ ವ್ಯಕ್ತಿ ಮಂಗಳವಾರ ಮುಂಜಾನೆ ಮಡಿವಾಳ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಹೇಳಿದ್ದ. ಮಧ್ಯಾಹ್ನದ ವೇಳೆಗೆ ಸ್ಫೋಟವಾಗಲಿದೆ ಎಂದೂ ಹೇಳಿದ್ದ. ಈ ಸುದ್ದಿಯನ್ನು ತತ್ ಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ರವಾನಿಸಲಾಯಿತು. ಆದರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಂತರ ಇದು ಹುಸಿ ಬಾಂಬ್ ಕರೆ ಎಂಬುದು ಎಲ್ಲರ ಆತಂಕವನ್ನು ನಿವಾರಿಸಿತು.
ಮತ್ತಷ್ಟು
ಸರಕಾರಿ ಭೂಮಿ ಅತಿಕ್ರಮಣ ಪತ್ತೆ
ಮಹಿಳಾ ದೌರ್ಜನ್ಯ: ವಿಶೇಷ ನ್ಯಾಯಾಲಯ ಸ್ಥಾಪನೆ ಚಿಂತನೆ
ಬಿಎಸ್ಪಿಯತ್ತ ಸಿಂಧ್ಯ ಚಿತ್ತ: ಜೆಡಿಎಸ್‌ನಿಂದ ಖೊಕ್ ಸಾಧ್ಯತೆ
ಮಾತಿಗೆ ಬದ್ಧ : ಕುಮಾರಸ್ವಾಮಿ ಸ್ಪಷ್ಟನೆ
ಚಿತ್ರದುರ್ಗ, ಭಟ್ಕಳದಲ್ಲಿ ಅಪಘಾತ: 13 ಬಲಿ
ಮಧ್ಯಂತರ ಚುನಾವಣೆ: ಮಿತ್ರ ಪಕ್ಷಗಳ ಭಿನ್ನ ಮುಖ