ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧ: ಜನತೆ ಹರ್ಷ
ಮೊಬೈಲ್ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ 16 ವರ್ಷದೊಳಗಿನ ಮಕ್ಕಳು ಇನ್ನು ಮುಂದೆ ಶಾಲಾ ಆವರಣದಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ರಾಜ್ಯದ ಜನತೆ ಸ್ವಾಗತಿಸಿದೆ.

ಶಾಲಾ ಆವರಣದಲ್ಲಿ ಮೊಬೈಲ್ ಬಳಸಿದರೆ ಅದನ್ನು ಕಿತ್ತುಕೊಳ್ಳಲು ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ. ಪಿಯುಸಿ ಹಂತದ ವಿದ್ಯಾರ್ಥಿಗಳಿಗೂ ಈ ನಿಷೇಧ ವಿಸ್ತರಣೆ ಸಂಭವವಿದೆ.

ಆದರೆ ಮೊಬೈಲ್ ಉತ್ಪಾದನಾ ಸಂಸ್ಥೆಗಳು ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ದುಷ್ಪರಿಣಾಮಗಳು ಆಗುತ್ತವೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳು ಲಭ್ಯವಿಲ್ಲವೆಂದು ಪ್ರತಿಪಾದಿಸಿದೆ.

ಸರಕಾರ, ದೂರವಾಣಿ ತಂತ್ರಜ್ಞಾನ ಕೇಂದ್ರಗಳೊಂದಿಗೆ ನಡೆಸಿದ ಸಂವಾದದಲ್ಲಿ ಮೊಬೈಲ್ ತಂತ್ರಜ್ಞಾನ ಪರಿಣಿತರು, 16 ವರ್ಷದ ಮಕ್ಕಳು ಮೊಬೈಲ್ ಬಳಸುವುದರಿಂದ ಮಕ್ಕಳ ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಂಶೋಧನಾ ವರದಿಯನ್ನು ಪ್ರಕಟಿಸಿದ್ದಾರೆ.

ಆದರೆ ಈ ವರದಿಯನ್ನು ತಳ್ಳಿ ಹಾಕಿದ ಮೊಬೈಲ್ ಉತ್ಪಾದಕ ಸಂಸ್ಥೆಗಳು ವರದಿ ಪಾರದರ್ಶಕವಾಗಿಲ್ಲವೆಂದು ತಳ್ಳಿಹಾಕಿವೆ. ನಮ್ಮ ಜಾಗತಿಕ ಮಟ್ಟದಲ್ಲಿರುವ ಮೊಬೈಲ್ ಉತ್ಪಾದಕ ಸಂಸ್ಥೆಗಳು ಗ್ರಾಹಕರ ಆರೋಗ್ಯದ ಬಗ್ಗೆ ಅನೇಕ ಸಂಶೋಧನೆಯನ್ನು ನಡೆಸಿದ್ದು, ಯಾವುದೇ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ ಎಂದು ಪ್ರಕಟಿಸಿವೆ.
ಮತ್ತಷ್ಟು
ಆರೋಪಿ ಸೈಯದ್ ಇಮ್ರಾನ್‌ಗೆ ಮತ್ತೆ ಮಂಪರು ಪರೀಕ್ಷೆ
ಗುರುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಕೇಂದ್ರ ಕೃಷಿ ಸಚಿವರೊಂದಿಗೆ ಸಿಎಂ ಚರ್ಚೆ
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಬಾಂಬ್ ಬೆದರಿಕೆ : ವಿಧಾನ ಸೌಧ ಪರಿಶೀಲನೆ
ಸರಕಾರಿ ಭೂಮಿ ಅತಿಕ್ರಮಣ ಪತ್ತೆ