ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರ ಪುತ್ರ ಜಗದೀಶ್ ನಾಯ್ಡು ಹಾಗೂ ಭಾವಮೈದನ ಬಾಬು ನಾಯ್ಡು ಒಟ್ಟು 16.35 ಎಕರೆ ಸರ್ಕಾರಿ ಭೂ ಆತಿಕ್ರಮಣ ಮಾಡಿದ್ದಾರೆ ಎಂಬ ವಿಧಾನಮಂಡಲದ ಜಂಟಿ ಸದನ ಸಮಿತಿಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಅವರ ಆರೋಪವನ್ನು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿರಾಕರಿಸಿದ್ದಾರೆ.
ಯಾರು ಒತ್ತುವರಿಯ ಆರೋಪಿಗಳೋ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ಹೇಳಿದ್ದಾರೆ. ಆದರೆ ಅದಕ್ಕೆ ಪ್ರತಿಕ್ರಿಯಿಸಿದ ರಾಮಸ್ವಾಮಿ ಅವರು ತಾವು ನಿರಾಧಾರವಾಗಿ ಈ ಆರೋಪ ಮಾಡುತ್ತಿಲ್ಲ, ಎಲ್ಲವೂ ದಾಖಲೆಗಳೇ ಹೇಳುತ್ತಿವೆ ಎಂದು ಪುನರುಚ್ಚರಿಸಿದ್ದಾರೆ.
ಆನೇಕಲ್ ತಾಲೂಕಿನ ಚಿಕ್ಕನಾಗಮಂಗಲದ ಸರ್ವೇ ನಂಬರ್ 31ರಲ್ಲಿ 5.25 ಎಕರೆ, ಸರ್ವೆ ನಂಬರ್ 177ರಲ್ಲಿ 4.4. ಎಕರೆ ಸರ್ಕಾರಿ ಭೂಮಿ ಕಬಳಿಸಲಾಗಿದೆ. ಭೂ ಒತ್ತುವರಿ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
|