ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ: ದೇವೇಗೌಡ
ಅಧಿಕಾರ ಹಸ್ತಾಂತರ ಕುರಿತು ರಾಜ್ಯ ಬಿಜೆಪಿ ನಾಯಕರೊಂದಿಗೆ ಈ ತಿಂಗಳ 27 ಅಥವಾ 28 ರಂದು ಸಮಾಲೋಚನೆ ನಡೆಸುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹೇಳಿ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಿಗೆ ಬಿಳಿಫಾರಂ ನೀಡುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಅವರ ಈ ಹೇಳಿಕೆಯ ಹಿಂದೆ ಯಾವ ರಹಸ್ಯ ಅಡಗಿದೆ ಎಂಬ ಕುತೂಹಲ ಹುಟ್ಟಿದೆ.

ಒಪ್ಪಂದದ ಪ್ರಕಾರ ಅಕ್ಟೋಬರ್ 3 ರಂದು ಬಿಜೆಪಿಗೆ ಅಧಿಕಾರವನ್ನು ಹಸ್ತಾಂತರಿಸಬೇಕಿದೆ. ಆದರೆ ಕೇವಲ ನಾಲ್ಕೈದು ದಿನಗಳ ಮುಂಚೆ ಬಿಜೆಪಿ ನಾಯಕರೊಂದಿಗೆ ದೇವೇಗೌಡರು ಸಮಾಲೋಚಿಸಿ ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬುದು ಬಿಜೆಪಿಯವರಿಗೆ ಯಕ್ಷ ಪ್ರಶ್ನೆ ಯಾಗಿದೆ.
ಮತ್ತಷ್ಟು
ಭೂ ಒತ್ತುವರಿ ಪ್ರಕರಣ: ಸಚಿವರ ನಿರಾಕರಣೆ
ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧ: ಜನತೆ ಹರ್ಷ
ಆರೋಪಿ ಸೈಯದ್ ಇಮ್ರಾನ್‌ಗೆ ಮತ್ತೆ ಮಂಪರು ಪರೀಕ್ಷೆ
ಗುರುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಕೇಂದ್ರ ಕೃಷಿ ಸಚಿವರೊಂದಿಗೆ ಸಿಎಂ ಚರ್ಚೆ
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ