ಅಯ್ಯಂಗಾರ್ ಐಪಿಎಸ್ ಹೆಸರಿನ ಚಲನ ಚಿತ್ರವನ್ನು ಆರಂಭಿಸುವ ಯುನಿವರ್ಸಲ್ ಮೂವೀಸ್ ಸಂಸ್ಥೆಯ ಕ್ರಮವನ್ನು ಖಂಡಿಸಿ ಗುರುವಾರ ಅಖಿಲ ಭಾರತ ಚಾಣಕ್ಯ ಬ್ರಾಹ್ಮಣ ಸಂಘ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿತು.
ಸಂಘದ ಅಧ್ಯಕ್ಷ ಆರ್ . ಪ್ರಕಾಶ್ ಅವರ ನೇತೃತ್ವದಲ್ಲಿ ಚೇಂಬರ್ ನ ಉಪಾಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಬ್ರಾಹ್ಮಣ ಸಮಾಜದ ಮುಂದಾಳುಗಳು ಭಾಗವಹಿಸಿದ್ದರು.
ಚಲನಚಿತ್ರದಂತಹ ಸಮೂಹ ಮಾಧ್ಯಮ ಮೂಲಕ ಯಾವುದೇ ಜಾತಿಯ ಹೆಸರನ್ನು ಬಳಸಿ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪು, ಇದು ಖಂಡನಾರ್ಹ.
ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಹೆಸರನ್ನು ಬಳಸಿ ಚಿತ್ರ ನಿರ್ಮಾಣಗೊಳಿಸುವುದಕ್ಕೆ ಅನುಮತಿ ನೀಡಬಾರದಾಗಿ ಫಿಲಂ ಚೇಂಬರ್ ಅನ್ನು ಒತ್ತಾಯಿಸಿತು.
ರಾಜ್ಯಾದ್ಯಂತ ಸುಮಾರು ಎರಡು ಲಕ್ಷಕ್ಕೂ ಅಧಿಕ ಅಯ್ಯಂಗಾರ್ ಕುಟುಂಬಗಳು ನೆಲೆಸಿದ್ದು ಇಡೀ ಅಯ್ಯಂಗಾರ್ ಸಮುದಾಯಕ್ಕೆ ಈ ರೀತಿಯ ಹೆಸರನ್ನು ಬಳಸಿ ಚಿತ್ರ ನಿರ್ಮಿಸಹೊರಟಿರುವುದು ತೀವ್ರ ಅಸಮಧಾನಕ್ಕೆ ಕಾರಣವಾಗಿದೆ.
ಜಾತಿ/ ಸಮುದಾಯದ ಹೆಸರಿನಲ್ಲಿ ಇಡೀ ಸಮುದಾಯದ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಈ ಚಿತ್ರ ಸಂಸ್ಥೆಯು ನಡೆದುಕೊಳ್ಳುತ್ತಿರುವುದು ನೋವುಂಟು ಮಾಡಿದೆ ಎಂದು ಪ್ರಕಾಶ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಸಂಚಾಲಕ ಹೆಚ್.ಜಿ.ಲಕ್ಷ್ಮೀನಾರಾಯಣ, ಬ್ರಾಹ್ಮಣ ಸಮಾಜದ ಎನ್.ಎಸ್.ರಮಾಕಾಂತ್, ಕೆ.ಎನ್.ಶ್ರೀಕಂಠಯ್ಯ, ವೆಂಕಟರಾಮಶಾಸ್ತ್ತ್ರಿ ಸೇರಿದಂತೆ ಅನೇಕರು ಹಾಜರಿದ್ದರು.
|