ಅಧಿಕಾರ ಹಸ್ತಾಂತರಗೊಳ್ಳುವ ಅಕ್ಟೋಬರ್ 3ರ ನಂತರದ ವಿದ್ಯಮಾನಗಳನ್ನು ಗಮನಿಸಿ ನಂತರ ಮಧ್ಯಂತರ ಚುನಾವಣೆ ಬಂದರೆ ಏನು ಮಾಡಬೇಕೆಂಬುದನ್ನು ಕಾಂಗ್ರೆಸ್ ಪಕ್ಷ ನಿರ್ಧರಿಸಲಿದೆ ಎಂದು ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಧರಂಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರೂ ಮಧ್ಯಂತರ ಚುನಾವಣೆ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಗುರುವಾರ ಶುಕ್ರವಾರ ತಿಳಿಸಿದ್ದಾರೆ. ಸರ್ಕಾರವೇ ಗೊಂದಲದ್ದಲಿರುವುದರಿಂದ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ ಎಂದು ಟೀಕಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರ ಮತಗಳು ಪಡೆಯದಿರುವಂತೆ ಸರ್ಕಾರ ಸಂಚು ಹೂಡಿದೆ ಎಂದು ಆರೋಪಿಸಿದ್ದಾರೆ.
ಶುಕ್ರವಾರ ಚುನಾವಣೆ ನಡೆಯಲಿದ್ದು, ತಮಗೆ ಮತನೀಡುವ ಅಲ್ಪಸಂಖ್ಯಾತರು ಮಸೀದಿ ಹಾಗು ಹಬ್ಬದ ವಾತವರಣದಲ್ಲಿ ನಿರತರಾಗುವುದರಿಂದ ಅವರ ಮತ ತಾವು ಪಡೆಯಲಾಗುವುದಿಲ್ಲ ಎಂದಿದ್ದಾರೆ.
|