ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಾಲ ಮನ್ನಾ: ಜೆಡಿ( ಎಸ್) ಕಾರ್ಯಕ್ರಮ
ಜೆಡಿಎಸ್ ರಾಜ್ಯಾಧ್ಯಕ್ಷರಾದ ತಕ್ಷಣದಿಂದಲೇ ಬಿಜೆಪಿ ಮೇಲೆ ಮಾತಿನ ಬಾಂಬ್ ಎಸೆಯುತ್ತಿರುವ ಮೆರಾಜುದ್ದೀನ್ ಪಟೇಲ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ರೈತರ ಸಾಲಮನ್ನಾ ಯೋಜನೆ ರಾಜ್ಯ ಸರ್ಕಾರದ ಮಹತ್ವದ ಯೋಜನೆ. ಇದರಿಂದ ರೈತ ಸಮುದಾಯ ಸಂತೋಷ ಪಟ್ಟಿದೆ. ಆದರೆ ರೈತ ಸಾಲಮನ್ನಾ ಯೋಜನೆಗೆ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳುವ ಮೂಲಕ ಮುಂದಿನ ಮುಖ್ಯಮಂತ್ರಿ ಎಂದು ಕನಸು ಕಾಣುತ್ತಿರುವ ಯಡಿಯೂರಪ್ಪ ಅವರಿಗೆ ಇರುಸು ಮುರುಸು ಉಂಟು ಮಾಡಿದ್ದಾರೆ.

ದೇವೇಗೌಡರು ರೈತರ ಸಾಲ ಮನ್ನಾ ಯೋಜನೆ ಜಾರಿ ಗೊಳಿಸುವಂತೆ ಬರೆದಿರುವ ಪತ್ರಕ್ಕೆ ಬೆಲೆ ಕೊಟ್ಟು ಯಡಿಯೂರಪ್ಪನವರ ವಿರೋಧದ ನಡುವೆಯೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲಮನ್ನಾ ಯೋಜನೆಯನ್ನು ಜಾರಿಗೆ ತಂದರು ಎಂದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ಸ್ಥಳೀಯ ಚುನಾವಣೆ ಪ್ರಚಾರ ಸಭೆಯಲ್ಲಿ ಮೆರಾಜುದ್ದೀನ್ ಹೇಳಿದ್ದಾರೆ.
ಮತ್ತಷ್ಟು
ಅತಿವೃಷ್ಟಿ ನಷ್ಟ : ಉನ್ನತ ಸಮಿತಿ ರಚನೆ
ಮಧ್ಯಂತರ ಚುನಾವಣೆ :ಕಾಂಗ್ರೆಸ್ ನಿರ್ಧಾರ
ಪ್ಯಾಕೇಜ್: ಉಪ ಸಮಿತಿ ಸೂಚನೆ
ಅಯ್ಯಂಗಾರ್ ಐಪಿಎಸ್' ಹೆಸರಿಗೆ ಆಕ್ಷೇಪ
ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ: ದೇವೇಗೌಡ
ಭೂ ಒತ್ತುವರಿ ಪ್ರಕರಣ: ಸಚಿವರ ನಿರಾಕರಣೆ