ಅಧಿಕಾರ ಹಸ್ತಾಂತರ ಕುರಿತ ಎಲ್ಲಾ ಗೊಂದಲಗಳ ನಡುವೆ ಕೇಂದ್ರ ಸಚಿವರು ಸಹಾ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.
ಕೇಂದ್ರಮಂತ್ರಿ ಶರದ್ ಪವಾರ್ ಹಾಗೂ ಕರ್ನಾಟಕದಲ್ಲಿನ ಸಮ್ಮಿಶ್ರ ಸರ್ಕಾರಕ್ಕು ಸಂಬಂಧವೇ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದ ಅವರು ಕಾಂಗ್ರೆಸ್ಯೊಂದಿಗೆ ಮತ್ತೆ ಮೈತ್ರಿಗೆ ಮುಂದಾಗಿ, ಇಲ್ಲವೇ ಚುನಾವಣೆಯನ್ನು ಎದುರಿಸಲು ಸಿದ್ಧರಾಗಿ, ಅಷ್ಟೇ ಹೊರತು ಬಿಜೆಪಿಗೆ ಅಧಿಕಾರ ನೀಡಲು ಮುಂದಾಗಬೇಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಬುದ್ದಿವಾದ ಹೇಳಿದ್ದರೆಂದು ತಿಳಿದುಬಂದಿದೆ.
ಜೆಡಿಎಸ್ ವರಿಷ್ಠ ದೇವೇಗೌಡರ ದೀರ್ಘಕಾಲದ ಸ್ನೇಹಿತರು ಮತ್ತು ಅವರ ಕುಟುಂಬದ ಹಿತೈಷಿ ಎಂದು ಪರಿಗಣಿಸಲಾಗುವ ಪವಾರ್ ಅವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ದೆಹಲಿಯಲ್ಲಿ ಶರದ್ ಪವಾರ್ ಭೇಟಿ ಯಾಗಿ ಮಾತುಕತೆ ನಡೆಸಿದ್ದರು.
ಇದೇ ರೀತಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ ಮತ್ತೊಬ್ಬ ಕೇಂದ್ರ ಸಚಿವರೆಂದರೆ ಕರ್ನಾಟಕದವರಾದ ಎಂ.ವಿ.ರಾಜಶೇಖರನ್ ಅವರು.
|