ದಿನಕ್ಕೊಂದು ಬಾಂಬ್ ಸಿಡಿಸಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತಿರುವ ಜೆಡಿಎಸ್ ರಾಜ್ಯಧ್ಯಕ್ಷ ಮೆರಾಜುದ್ದೀನ್ ಪಟೇಲ್ ಗುಲ್ಬರ್ಗಾದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರೇ ಮುಂದುವರೆಯಬೇಕು ಎಂದು ರಾಜ್ಯದ ಜನತೆ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಅನೇಕ ಅಭಿವೃದ್ದಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಸಹಾ ಅದಕ್ಕೆ ಸಹಕರಿಸುತ್ತಿದ್ದಾರೆ. ಹಾಗಾಗಿ ಅವರಿಬ್ಬರ ಆಡಳಿತ ಹಾಗೇ ಮುಂದುವರೆಯಲಿ ಎಂಬುದೆ ರಾಜ್ಯದ ಜನರ ಆಶಯ ಎಂದು ಪಟೇಲ್ ವಿವರಿಸಿದ್ದಾರೆ.
ಇದೇ ಜೋಡಿ ಮುಂದುವರೆದರೆ ಇನ್ನಷ್ಟು ರಾಜ್ಯ ಅಭಿವೃದ್ದಿಗೊಳ್ಳುತ್ತದೆ ಎಂಬುದು ಅವರ ಮಾತಿನ ಸಾರಾಂಶ. ಬಿಜೆಪಿಗೆ ಅಧಿಕಾರ ಹಸ್ತಾಂತರ ಕುರಿತು ಜೆಡಿಎಸ್ ಶಾಸಕಾಂಗ ಸಭೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.
|