ರಾಜ್ಯಾದ್ಯಂತ ಶುಕ್ರವಾರ ಗೌರಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಹಬ್ಬಕ್ಕೆ ಅಗತ್ಯವಿರುವ ಹೂವು ಹಣ್ಣು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನ್ನಕ್ಕೇರಿದ್ದರೂ ಜನರ ಸಂಭ್ರಮಕ್ಕೇನೂ ಕೊರತೆ ಯಾಗಿಲ್ಲ.
ಸುರಿಯುತ್ತಿರುವ ಮಳೆಯಲ್ಲೇ ಹಬ್ಬಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳನನು ಖರೀದಿಸುವಲ್ಲಿ ಜನರು ನಿರತರಾಗಿದ್ದಾರೆ. ಎಲ್ಲ ಪ್ರದೇಶಗಳಲ್ಲೂ ಗೌರಿ ಹಬ್ಬವನ್ನು ಭಕ್ತಿಯಿಂದ ಆಚರಿಸುತ್ತಿರುವ ಸುಮಂಗಳಿಯರು ಗೌರಿ ಪೂಜೆ ಸಲ್ಲಿಸಿ ಮುತ್ತೈದಯರಿಗೆ ಬಾಗಿನ ಅರ್ಪಿಸುವಲ್ಲಿ ನಿರತರಾಗಿದ್ದಾರೆ.
ಎಲ್ಲೆಡೆ ದೇವಾಲಯಗಳಲ್ಲೂ ಸಹಾ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಗೌರಿ ಹಾಗೂ ಗಣೇಶನ ವಿಗ್ಪ್ರಹಗಳ ಬೆಲೆ ಹೆಚ್ಚಾದರೂ ಅವುಗಳ ಮಾರಾಟ ಮಾತ್ರ ಭರದಿಂದ ಸಾಗಿದೆ.
|