ಅನೂಹ್ಯ ಬೆಳವಣಿಗೆಯಲ್ಲಿ ಜೆಡಿಎಸ್ ನಿಂದ ಸದ್ಯದಲ್ಲೇ ಉಚ್ಛಾಟನೆಗೆ ಗುರಿಯಾಗಲಿರುವ ಪಿ.ಜಿ.ಆರ್.ಸಿಂಧ್ಯ ಅವರ ಬೆಂಬಲಿಗರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲವನ್ನು ಪ್ರಕಟಿಸಿದ್ದಾರೆ.
ಈ ಬೆಳವಣಿಗೆಯಿಂದ ಸಿಂಧ್ಯ ಅವರು ಏಕಾಂಗಿ ಯಾಗಲಿದ್ದಾರೆ ಎಂಬುದು ರಾಜಕೀಯ ಪರಿಣತರ ವಿಶ್ಲೇಷಣೆ. ಸಿಂಧ್ಯ ಅವರು ಸದ್ಯದಲ್ಲೇ ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳಲಿರುವುದಾಗಿ ಪ್ರಕಟಿಸಿರುವ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಜೆಡಿಎಸ್ ಸಜ್ಜಾಗುತ್ತಿದೆ.
|