ಕಾಲೇಜಿಗೆ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ಕಾಟದ ಪಿಡುಗಿನ ಭಯ. ಆದರೆ ಈಗ ಹೊಸದೊಂದು ಭೀತಿ ಆರಂಭವಾಗಿದೆ.
ಹೇಗಾದರೂ ಮಾಡಿ ಹಣ ಮಾಡುವವರ ದೃಷ್ಟಿ ಈಗ ಇಂಜಿನಿಯರಿಂಗ್ ಪ್ರವೇಶ ಪಡೆದವರ ಮೇಲೆ ಬಿದ್ದಿದೆ. ತಾವು ಪಡೆದಿರುವ ಸೀಟುಗಳನ್ನು ತಮಗೆ ಬಿಟ್ಟುಕೊಡಬೇಕು ಎಂದು ಬೆದರಿಸುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಹಣದ ಆಮಿಷ ಒಡ್ಡುತ್ತಿದ್ದಾರೆ. ಅದಕ್ಕೆ ಬಗ್ಗದಿದ್ದರೆ ಹೆದರಿಸುವುದೂ ಉಂಟು. ಆರೀತಿ ಪಡೆದ ಸೀಟುಗಳನ್ನು ಹೆಚ್ಚಿನ ಬೆಲೆಗೆ ಏಜೆಂಟುಗಳು ಮಾರಿಕೊಳ್ಳುತ್ತಾರೆ. ಗ್ರಾಮೀಣ ಪ್ರಾಂತದಿಂದ ಬಂದು ಸಿಇಟಿಯಲ್ಲಿ ಉತ್ತೀರ್ಣರಾಗಿ ಇಂಜಿನಿಯರಿಂಗ್ ಸೀಟು ಪಡೆದವರು ಈ ಏಜೆಂಟುಗಳಿಗೆ ಬಲಿಪಶುಗಳಾಗುತ್ತಿದ್ದಾರೆ.
ಸಿಇಟಿ ನೀಡಿದ ಪ್ರವೇಶ ಪತ್ರಗಳನ್ನು ಬಲವಂತವಾಗಿ ಕಸಿದುಕೊಂಡು ಬೇರೆಯವರಿಗೆ ಸೀಟುಗಳನ್ನು ಮಾರುವ ದಂಧೆ ಕಳೆದ ವರ್ಷದಿಂದ ಆರಂಭವಾಗಿದೆ.
ದಾಖಲೆಗಳಲ್ಲಿ ಎಲ್ಲಾ ಕಾನೂನು ಬದ್ಧವಾಗಿ ನಡೆಯುತ್ತದೆ. ಈ ದಂಧೆ ಇನ್ನೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಂತಿಲ್ಲ.
|