ಗೌರಿ-ಗಣೇಶ ಹಬ್ಬವನ್ನು ಜನರು ಸಮಾಧಾನವಾಗಿ ಆಚರಿಸಲು ಬುಧವಾರದಿಂದ ಸುರಿಯುತ್ತಿರುವ ಮಳೆ ಬೆಂಗಳೂರಿಗರನ್ನು ಬಿಡುತ್ತಿಲ್ಲ.
ಬುಧವಾರ ಬಾಪೂಜಿನಗರದಲ್ಲಿ ಒಂದು ಮನೆಯ ಗೋಡೆ ಕುಸಿದಿದ್ದರಿಂದ ತಾಯಿ ಹಾಗೂ ಮಗ ಸಾವನ್ನಪಿದ್ದಾರೆ. ಗುರುವಾರ ಬಿದ್ದ ಮಳೆಗೆ ಕುಮಾರಸ್ವಾಮಿ ಲೇಓಟ್ನ ಮನೆಯೊಂದರ ಗೋಡೆ ಕುಸಿದುಬಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಮಳೆರಾಯನ ಆರ್ಭಟಕ್ಕೆ ಬನ್ನೇರುಘಟ್ಟ, ಜೆ.ಪಿ.ನಗರ, ನಾಯಂಡಹಳ್ಳಿ, ಬನ್ನೇರುಘಟ್ಟ ರಸ್ತೆ, ಮಾರುಕಟ್ಟೆ, ಸಿಲ್ಕ್ಬೋರ್ಡ್ ಜಂಕ್ಷನ್ ಮುಂತಾದ ಪ್ರದೇಶಗಳಲ್ಲಿ ಮಳೆ ನಿರು ನುಗ್ಗಿ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯುಂಟಾಯಿತು.
ನಾಯಂಡಹಳ್ಳಿ ಬಳಿ ವೃಷಭಾವತಿ ನೀರು ತುಂಬಿ ಹರಿಯುತ್ತಿದ್ದು, ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ತೊಂದರೆ ಯಾಯಿತು.
ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಅಡೆತಡೆಗಳನ್ನು ತೆರವುಗೊಳಿಸಲಾಯಿತು.
ಬೆಂಗಳೂರಿನಲ್ಲಿ ಬುಧವಾರ ಸುರಿದ ಮಳೆ ಪ್ರಮಾಣ 79.8 ಮಿ.ಮೀ. ದಾಖಲಾಗಿದೆ. ಗುರುವಾರ ಸುರಿದ ಮಳೆ ಪ್ರಮಾಣ 9.9 ಮಿ.ಮೀ. ದಾಖಲಾಗಿದೆ. ಭಾರಿ ಮಳೆಯಿಂದಾಗಿ ನಗರದ ಎಲ್ಲಾ ರಸ್ತೆಗಳಲ್ಲೂ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ.
ಇನ್ನೂ ಎರಡು ದಿನಗಳು ಮಳೆ ಬರುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ನಡುವೆ ಭಾರಿ ಮಳೆ ಸುರಿದಾಗಲೆಲ್ಲಾ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ನಾಗರಿಕರು ಈ ಬಾರಿ ಸಹಾ ಅದೇ ರೀತಿ ವರ್ತಿಸುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಬಿಎಂಪಿ ಅಧಿಕಾರಿಗಳು ತಮ್ಮ ರಕ್ಷಣೆಗೆ ಬರುತ್ತಿಲ್ಲ ಎಂಬದು ಅವರ ಅಹವಾಲಾಗಿದೆ.
|