ಅಂತಾರಾಷ್ಟ್ತ್ರೀಯ ಖ್ಯಾತಿಯ ಕೊಲಾಜ್ ಕಲಾವಿದ ಡಾ.ವಿ. ಬಾಲು ಗುರುವಾರ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಬಸವನಗುಡಿಯ ಕೃಷ್ಣಾರಾವ್ ಉದ್ಯಾನವನದ ಬಳಿ ರಸ್ರೆ ದಾಟುತ್ತಿದ್ದ ಬಾಲು ಅವರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆಯಿತು.
ಗಂಭೀರವಾಗಿ ಗಾಯಗೊಂಡ ಅವರನ್ನು ಸಮೀಪವಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲಿಸಲಾಯಿತು.
ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಅಪಘಾತಕ್ಕೆ ಕಾರಣನಾದ ದ್ವಿಚಕ್ರ ವಾಹನ ಸವಾರನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.
ಕಲೆಯ ಮೂಲಕ ಶಾಂತಿ ಪ್ರತಿಪಾದನೆ ಮಾಡುತ್ತ ಕಳೆದ 25 ವರ್ಷಗಳಿಂದಲೂ ದೇಶ ವಿದೇಶಗಳನ್ನು ಸುತ್ತಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದ ಅವರು ಅಂತರ್ಶಾಂತಿ ಕಲಾ ಅಥವಾ ಆರ್ಟ್ ಆಫ್ ಇನ್ನರ್, ಪೀಸ್ಳಿ ಕಲಾಕೃತಿಗಳು ಹಾಗೂ ಪ್ರಯತ್ನಗಳ ಮೂಲಕ ವಿವಿಧ ವಯೋಮಾನದ ಜನರಲ್ಲಿ ಕಲೆಯ ಆಸಕ್ತಿ ಮೂಡಿಸಿದ್ದರು.
ಮಕ್ಕಳ ಕುರಿತ ಸಾಹಿತ್ಯ ಕೃತಿ ಸೇರಿ ಶಾಂತಿಯ ಬಗ್ಗೆ ಏಳು ಪುಸ್ತಕಗಳನ್ನು ರಚಿಸಿದ್ದಾರೆ.
|