ದಿನೇ ದಿನೇ ಹೆಚ್ಚುತ್ತಿರುವ ವಾಹನ ಸಂಚಾರ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ನಗರ ಸಂಚಾರಿ ಪೊಲೀಸರು, ಮಾಲಿನ್ಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಲುಷ್ಯ ನಿಯಂತ್ರಣ ಇಲಾಖೆ ವೈಫಲ್ಯ ಸಾಧಾರಣವಾಗಿದ್ದರೂ ಆ ಎರಡು ಇಲಾಖೆಗಳ ಕಾರ್ಯವನ್ನು ನಿರ್ವಹಿಸಲು ರಾಜ್ಯ ಸಾರಿಗೆ ಸಂಸ್ಥೆ ಮುಂದಾಗಿದೆ.
ನಗರದಲ್ಲಿ ವಾಹನ ದಟ್ಟಣೆ ಇರುವ ಕಡೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹತ್ತು ಗ್ರೀನ್ ಬ್ರಿಗೇಡ್ ವಾಹನಗಳಿಗೆ ಸಾರಿಗೆ ಸಚಿವ ಎನ್.ಚೆಲುವರಾಯಸ್ವಾಮಿ ಹಸಿರು ನಿಶಾನೆ ತೋರಿದ್ದಾರೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ಹಾಗೂ ವಾಹನಗಳು ಉಗುಳುವ ಹೊಗೆಯಿಂದ ವಾಯು ಮಾಲಿನ್ಯವನ್ನು ಪತ್ತೆ ಹಚ್ಚಿ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡುವ ಕೆಲಸವನ್ನೂ ಸಹಾ ಈ ವಾಹನಗಳು ಮಾಡಲಿವೆ ಎಂದು ಸಚಿವರು ತಿಳಿಸಿದರು.
ಕೆಮೆರಾ ಸೇರಿದಂತೆ ಅತ್ಯಾಧುನಿಕ ಸಲಕರಣೆಗಳನ್ನು ಒಳಗೊಂಡಿರುವ ಹತ್ತು ವಾಹನಗಳು ಸದ್ಯಕ್ಕೆ ಕಾರ್ಯಾರಂಭ ಮಾಡಿದ್ದು, ಮುಂದೆ ಗ್ರೀನ್ ಬ್ರಿಗೇಡ್ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಅವರು ಹೇಳಿದರು.
|