ಸಾಲಮನ್ನಾ,ವೈಜ್ಞಾನಿಕ ಬೆಲೆ,ವಿದ್ಯುತ್,ನೀರಾವರಿ ವಿಷಯಗಳಲ್ಲಿ ಇನ್ನು ಮುಂದೆ ಆಶ್ವಾಸನೆ ಕೇಳಲು ಸಾಧ್ಯವಿಲ್ಲವಾದ್ದರಿಂದ ಸೆ.24ರಂದು ಸಾವಿರಾರು ರೈತರು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಳ್ಳಿಪರ,ರೈತ ಪರ ಎಂಬುದನ್ನು ಕೇಳಿ,ಕೇಳಿ ಸಾಕಾಗಿದೆ.2ತಿಂಗಳ ಹಿಂದೆ ರೈತರ ಸಭೆ ಕರೆದಿದ್ದ ಮುಖ್ಯಮಂತ್ರಿಗಳು ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು.
ಎಲ್ಲಾ ಭರವಸೆ ಹಾಗೆಯೇ ಉಳಿದಿದ್ದು,ಮುಖ್ಯಮಂತ್ರಿಗಳನ್ನು ನೇರವಾಗಿ ಮುಖಾಮುಖಿಯಾಗಿ ಉತ್ತರ ಪಡೆಯಲು ರೈತರು ಬಯಸಿದ್ದಾರೆಂದು ತಿಳಿಸಿದರು.
ಅಂದು ಬೆಳಿಗ್ಗೆ ರಾಜ್ಯದ ನಾನಾ ಭಾಗಗಳಿಂದ ರೈಲು ನಿಲ್ದಾಣಕ್ಕೆ ಬಂದಿಳಿಯುವ ರೈತರು ಮೆರವಣಿಗೆಯಲ್ಲಿ ತೆರಳಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಿದ್ದಾರೆ.
ಬೆಳೆ ವಿಮೆ ಮೂರು ವರ್ಷದಿಂದ ಬಾಕಿಯಿದ್ದ ರೈತಪರ ಸರಕಾರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗಳು ಇದಕ್ಕೆ ಸ್ಪಷ್ಟ ಉತ್ತರ ನೀಡುವಂತೆ ಮಾಡುತ್ತೇವೆ ಎಂದು ಹೇಳಿದರು.
|