ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಾಮೂಹಿಕ ತಡೆಯಾಜ್ಞೆ ರದ್ದುಪಡಿಸಿದ ಹೈಕೋರ್ಟ್
ಪೌರ ಸಂಸ್ಥೆಗಳ ಚುನಾವಣೆಯ ವಾರ್ಡ್ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮಾಡಿದ್ದ ತಿದ್ದುಪಡಿಗೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಸಾಮೂಹಿಕ ತಡೆಯಾಜ್ಞೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿ ಆದೇಶ ಹೊರಡಿಸಿದೆ.

ತಡೆಯಾಜ್ಞೆ ನೀಡಿ ಏಕ ಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರ ನಗರಸಭೆಯ ವಾರ್ಡ್ ನಂ.4ರ ಅಭ್ಯರ್ಥಿ ಕೆ.ಎಂ.ವೆಂಕಟೇಶ್ ಹಾಗೂ ಮತ್ತೋರ್ವರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆಗೆ ಸ್ವೀಕರಿಸಿದ ವಿಭಾಗೀಯ ಪೀಠ ಆ ಆದೇಶ ಹೊರಡಿಸಿದೆ.

ಮೀಸಲಾತಿ ಕುರಿತಂತೆ ಸರಕಾರ ಜು.30ರ ಅಂತಿಮ ಅಧಿಸೂಚನೆ ಹೊರಡಿಸಿದ್ದು,ಆ ನಂತರ ಸೆ.3ರಂದು ತಿದ್ದುಪಡಿ ಮಾಡಿದೆ.ಮರುದಿನ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ.ಹಾಗಾಗಿ ವೇಳಾಪಟ್ಟಿಗೆ ಮೊದಲೇ ತಿದ್ದುಪಡಿ ಮಾಡಿರುವುದರಲ್ಲಿ ತಪ್ಪೇನಿಲ್ಲ.

ಆದರೂ ತಿದ್ದುಪಡಿ ಪ್ರಶ್ನಿಸಿ ತೊಂದರೆಗೊಳಗಾದವರು ಸಲ್ಲಿಸಿದ ಅರ್ಜಿದಾರರಿಗೆ ಮಾತ್ರ ತಡೆಯಾಜ್ಞೆ ನೀಡಿರುವುದರಿಂದ ತಿದ್ದುಪಡಿ ಮುಖೇನ ನ್ಯಾಯೋಚಿತವಾಗಿ ಅವಕಾಶ ಲಭಿಸಿದ್ದ ಅಭ್ಯರ್ಥಿಗಳಿಗೂ ಅನನುಕೂಲವಾಗಿದೆ.

ಆದ್ದರಿಂದ ಏಕಸದಸ್ಯ ನ್ಯಾಯಪೀಠ ಸಾಮೂಹಿಕ ತಡೆಯಾಜ್ಞೆ ನೀಡಿರುವುದು ಸೂಕ್ತವಲ್ಲ ಎಂದು ಮೇಲ್ಮನವಿ ಪರವಾಗಿ ಹಿರಿಯ ವಕೀಲ ಕೆ.ಎಂ.ನಟರಾಜ್ ವಾದ ಮಂಡಿಸಿದರು.
ಮತ್ತಷ್ಟು
ಸೆ.24 ರಂದು ಸಿಎಂ ಮನೆಗೆ ಮುತ್ತಿಗೆ
ಹತ್ತು ಗ್ರೀನ್ ಬ್ರಿಗೇಡ್ ವಾಹನಗಳ ಬಿಡುಗಡೆ
ದ್ವಿ ಚಕ್ರ ವಾಹನ ಡಿಕ್ಕಿ : ಕಲಾವಿದ ವಿ.ಬಾಲು ಸಾವು
ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಮಳೆಯಾದರೂ ಕುಗ್ಗದ ಹಬ್ಬದ ಸಡಗರ
ಇಂಜಿನಿಯರಿಂಗ್ ಸೀಟುಗಳ ಮಾರಾಟದಂಧೆ