ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗಣೇಶ ಹಬ್ಬಕ್ಕೆ ತಣ್ಣೀರೆರಚಿದ ಮಳೆ
ಕಳೆದ ಮೂರು ದಿನಗಳಿಂದ ಮಳೆ ಬೆಂಗಳೂರು ನಗರದ ಬಹುತೇಕ ಕಡೆ ರಸ್ತೆಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿದ್ದು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ರಸ್ತೆಗಳಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿ ಗಂಟೆಗಟ್ಟಲೆ ಜನರು ಭಾರಿ ಟ್ರಾಫಿಕ್ ಜಾಮ್‌ನಲ್ಲೇ ಕಾಲ ಕಳೆಯುವಂತಾಗಿದೆ.

ಕಳೆದ ಮೂರು ದಿನಗಳಿಂದ ಸುಮಾರು 200 ಮಿ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರೆಯಲಿರುವುದಾಗಿ ಮುನ್ಸೂಚನೆ ನೀಡಿದೆ.

ಇಂಥ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಪರದಾಡುತ್ತಿದ್ದರೆ ನಿವಾಸಿಗಳು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ತಮ್ಮ ಸಹಾಯಕ್ಕೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮಳೆನೀರಿನಲ್ಲಿ ಕೊಚ್ಚಿಕೊಂಡುಹೊಗಿದೆ. ಗಣೇಶ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಬೇಕು.

ಆದರೆ ದುರ್ದೈವ ವೆಂದರೆ ಜನರೇ ನೀರಿನಲ್ಲಿ ಮುಳುಗಿದ್ದಾರೆ. ಮಳೆಗೆ ಸಿಲುಕಿದ ಹಲವೆಡೆ ಮರಗಳು ಧರೆಗುರುಳಿವೆ. ನಗರದಾದ್ಯಂತ 5600 ಮಂದಿ ಪರಿಹಾರ ಕಾರ್ಯದಲ್ಲಿ ನಿರತರಾಗಿರುವುದಾಗಿ ಬಿಬಿಎಂಪಿ ಆಯುಕ್ತ ಡಾ. ಸುಬ್ರಹಣ್ಯ ತಿಳಿಸಿದ್ದಾರೆ.

ಅರಕೆರೆ, ಹುಳಿಮಾವು, ಪುಟ್ಟೇನಹಳ್ಳಿ, ಬೇಗೂರು, ಸಾರಕ್ಕಿ, ಲಾಲ್ಬಾಣ್, ಮಡಿವಾಳ ಕೆರೆಗಳಲ್ಲಿ ನೀರು ತುಂಬಿ ಕೋಡಿ ಹರಿದಿದೆ. ಇನ್ನೂ ಎರಡು ದಿನ ಇದೇ ರೀತಿ ಮಳೆ ಮುಂದುವೆದರೆ ಕೆರೆ ಒಡೆಯುವ ಅಪಾಯ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಬಸ್ ಉರುಳಿ : 20 ಜನರ ಸಾವು
ಸಾಮೂಹಿಕ ತಡೆಯಾಜ್ಞೆ ರದ್ದುಪಡಿಸಿದ ಹೈಕೋರ್ಟ್
ಸೆ.24 ರಂದು ಸಿಎಂ ಮನೆಗೆ ಮುತ್ತಿಗೆ
ಹತ್ತು ಗ್ರೀನ್ ಬ್ರಿಗೇಡ್ ವಾಹನಗಳ ಬಿಡುಗಡೆ
ದ್ವಿ ಚಕ್ರ ವಾಹನ ಡಿಕ್ಕಿ : ಕಲಾವಿದ ವಿ.ಬಾಲು ಸಾವು
ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ