ಕೆಲವು ತಿಂಗಳ ಹಿಂದೆ ತನ್ನ ಸಂಭಾವ್ಯ ಉತ್ತರಾಧಿಕಾರಿ ಕುರಿತು ದಿನಕರನ್ ದೈನಿಕ ಪ್ರಕಟಿಸಿದ್ದ ಜನಾಭಿಪ್ರಾಯ ಸಂಗ್ರಹವನ್ನು ಇಂದು ತರಾಟೆಗೆ ತೆಗೆದುಕೊಂಡ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರು ತಾನು ಸದ್ಯಕ್ಕೆ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ ಎಂದು ಹೇಳಿದರು.
ಕೆಲ ದೈನಿಕ ಮತ್ತು ಸಾಪ್ತಾಹಿಕಗಳು ತಮ್ಮದೇ ರೀತಿ ಯೋಚಿಸುತ್ತವೆ ಮತ್ತು ನನ್ನ ನಿವೃತ್ತಿ ಕುರಿತು ಬರೆಯುತ್ತಿವೆ,ಅದು ಅವುಗಳ ಖಯಾಲಿ. ಆದರೆ ತಾನು ಸದ್ಯಕ್ಕೆ ರಾಜಕೀಯ ಚಟುವಟಿಕೆಯಿಂದ ನಿವೃತ್ತನಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮಾಜದ ಉದ್ಧಾರಕ್ಕಾಗಿ ದುಡಿಯುವಂತೆ ಅವರು ಎಲ್ಲ ನಿವೃತ್ತ ಸರಕಾರಿ ನೌಕರರನ್ನು ಆಗ್ರಹಿಸಿದರು. ಅವರು ತಮಿಳುನಾಡು ಸೇಲಂನಲ್ಲಿ ನಿವೃತ್ತ ಅಧಿಕಾರಿಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತರು ತಮ್ಮ ಸಮಯ ಮತ್ತು ಪ್ರಯತ್ನಗಳನ್ನು ಜನತೆಯ ಕಲ್ಯಾಣಕ್ಕಾಗಿ ಮುಡಿಪಾಗಿಡಬೇಕು ಮತ್ತು ಧಾರ್ಮಿಕ ಮತಾಂಧತೆಯ ಹಾಗೂ ಮೂಢನಂಬಿಕೆಹಳಂಥ ಸಾಮಾಜಿಕ ಪಿಡುಗಳನ್ನು ನಿರ್ಮೂಲನಗೊಳಿಸಲು ಪ್ರಯತ್ನಿಸಬೇಕು ಎಂದು ಕರುಣಾನಿಧಿ ಸಲಹೆ ನೀಡಿದರು.
|