ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಎಸ್ಪಿ ಪರವಾಗಿ ಸಿಂಧ್ಯ ಪ್ರಚಾರ
ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಳ್ಳಲು ತುದಿಗಾಲಲ್ಲಿ ನಿಂತಿರುವ ಜೆಡಿಎಸ್ ಬಂಡಾಯ ಶಾಸಕ ಪಿ.ಜಿ.ಆರ್.ಸಿಂಧ್ಯ ಬಿಎಸ್ಪಿ ಪರವಾಗಿ ಆನೇಕಲ್‌ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಅವರನ್ನು ಪಕ್ಷದಿಂದ ಉಚ್ಛಾಟಿಸಲು ಜೆಡಿಎಸ್ ವರಿಷ್ಠರು ಸಜ್ಜುಗೊಳ್ಳುತ್ತಿದ್ದರೂ ಅದನ್ನು ನಿರ್ಲ್ಯಕ್ಷಿಸಿ ಪಕ್ಷದ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಪುತ್ರ ತ್ರಿಶೂಲಪಾಣಿ ಅವರು ಬಿಎಸ್ಪಿಗೆ ಭಾನುವಾರ ಸೇರ್ಪಡೆಗೊಳ್ಳಲಿದ್ದಾರೆ.

ಇದರ ನಡುವೆ ಸಿಂಧ್ಯ ಅವರ ನೂರಾರು ಬೆಂಬಲಿಗರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ಸೂಚಿಸಿರುವುದು ಗಮನಿಸಿದರೆ ಸಿಂಧ್ಯ ಬೆಂಬಲಿಗರೂ ಸಹಾ ಅವರನ್ನು ಕೈಬಿಟ್ಟಂತೆ ಕಾಣುತ್ತದೆ.

ಸದ್ಯ ನಡೆಯಲಿರುವ ಕನಕಪುರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಗೆಲವಿಗೆ ಶ್ರಮಿಸಿದಲ್ಲಿ ಮುಂದಿನ ಒಂದು ತಿಂಗಳೊಳಗಾಗಿ ಕನಕಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಮಿಷ ಒಡ್ಡಿದ್ದಾರೆ.
ಮತ್ತಷ್ಟು
ಪರಾಮರ್ಶದ ನಂತರ ಅಧಿಕಾರ ಹಸ್ತಾಂತರ: ಕುಮಾರಸ್ವಾಮಿ
ರಾಜಕಾರಣದಲ್ಲಿ ಸಕ್ರಿಯ: ಕರುಣಾನಿಧಿ
ಗಣೇಶ ಹಬ್ಬಕ್ಕೆ ತಣ್ಣೀರೆರಚಿದ ಮಳೆ
ಬಸ್ ಉರುಳಿ : 20 ಜನರ ಸಾವು
ಸಾಮೂಹಿಕ ತಡೆಯಾಜ್ಞೆ ರದ್ದುಪಡಿಸಿದ ಹೈಕೋರ್ಟ್
ಸೆ.24 ರಂದು ಸಿಎಂ ಮನೆಗೆ ಮುತ್ತಿಗೆ