ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಷರತ್ತನ್ನು ಉಲ್ಲಂಘಿಸಿದ ಮಿತ್ರಪಕ್ಷಗಳು
ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸರ್ಕಾರ ರಚನೆ ಸಂದರ್ಭದಲ್ಲಿ ಕುದುರಿದ ಒಳ ಒಪ್ಪಂದದಲ್ಲಿ ರಾಜ್ಯದಲ್ಲಿ ನಡೆಯುವ ಯಾವುದೇ ಚುನಾವಣೆಯಾಗಲಿ ಉಭಯ ಪಕ್ಷಗಳೂ ಜಂಟಿಯಾಗಿ ಎದುರಿಸಬೇಕು ಎಂಬ ಷರತನ್ನು ಎರಡೂ ಪಕ್ಷಗಳೂ ಉಲ್ಲಂಘಿಸುತ್ತಿವೆ.

ದೇವೇಗೌಡ ಕುಟುಂಬದ ಕಡುವ್ಶೆರಿಯಾಗಿ ಮಾರ್ಪಟ್ಟಿರುವ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಯಾಗಲಿಲ್ಲ.

ಪರಿಣಾಮವಾಗಿ ಸಿದ್ದಾರಾಮಯ್ಯ ಜಯಗಳಿಸಿ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಿಗೆ ಮುಖಭಂಗವಾಯಿತು.

ಅಲ್ಲಿ ಜೆಡಿಎಸ್ ಪರವಾಗಿ ಬಿಜೆಪಿ ಪ್ರಚಾರ ನಡೆಸಲು ಮುಂದಾಗಲಿಲ್ಲ. ಅದೇ ರೀತಿ ಉಳ್ಳಾಲ ವಿಧಾನಸಭಾ ಚುನಾವಣೆಯಲ್ಲೂ ಸಹಾ ಎರಡು ಪಕ್ಷಗಳಿಗೆ ಹೊಂದಾಣಿಕೆಯಾಗದೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವಂತಾಯಿತು.

ಸದ್ಯದಲ್ಲೇ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಸಹಾ ಎರಡು ಪಕ್ಷಗಳ ಹಾದಿ ಬೇರೇ ಬೇರೇಯಾಗಿದ್ದು, ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವೇ ಬಹುತೇಕ ಮರುಕಳಿಸುತ್ತದೆಯೇ ಕಾದು ನೋಡಬೇಕಾಗಿದೆ.
ಮತ್ತಷ್ಟು
ಬಿಎಸ್ಪಿ ಪರವಾಗಿ ಸಿಂಧ್ಯ ಪ್ರಚಾರ
ಪರಾಮರ್ಶದ ನಂತರ ಅಧಿಕಾರ ಹಸ್ತಾಂತರ: ಕುಮಾರಸ್ವಾಮಿ
ರಾಜಕಾರಣದಲ್ಲಿ ಸಕ್ರಿಯ: ಕರುಣಾನಿಧಿ
ಗಣೇಶ ಹಬ್ಬಕ್ಕೆ ತಣ್ಣೀರೆರಚಿದ ಮಳೆ
ಬಸ್ ಉರುಳಿ : 20 ಜನರ ಸಾವು
ಸಾಮೂಹಿಕ ತಡೆಯಾಜ್ಞೆ ರದ್ದುಪಡಿಸಿದ ಹೈಕೋರ್ಟ್