ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸಿಎಂ ರಾಜೀನಾಮೆ ವದಂತಿ ?
ಮಂಗಳವಾರ ಸಂಜೆ ಕರೆದಿರುವ ತುರ್ತು ಸಚಿವ ಸಂಪುಟದ ಸಭೆಯನಂತರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿದೆ.

ಈ ತಿಂಗಳ 20 ರಂದು ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಬಿಜಿಪಿ ಸಚಿವರೆಲ್ಲರೂ ರಾಜಧಾನಿಯ ಹೊರಗಿದ್ದಾರೆ.
ಇಂಥ ಸಮಯದಲ್ಲಿ ದಿಢೀರ್ ಎಂದು ತುರ್ತು ಸಚಿವ ಸಂಪುಟ ಸಭೆ ಕರೆದಿರುವುದು ಬಿಜೆಪಿ ಸಚಿವರಿಗೆ ಧಿಗ್ಭ್ತ್ರಮೆ ಮೂಡಿಸಿದೆ.

ಬಿಜೆಪಿ ಸಚಿವರೆಲ್ಲರೂ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸೋಮವಾರ ಸಂಜೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಭೇಟಿ ಮಾಡಿ ಅರ್ಧ ತಾಸು ಸಮಾಲೋಚನೆ ನಡೆಸಿದ್ದಾರೆ.

ಪದ್ಮನಾಭನಗರದ ದೇವೇಗೌಡರ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಹಸ್ಯ ಮಾತುಕತೆ ನಡೆಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ವದಂತಿಗೆ ಪುಷ್ಟಿ ನೀಡಿವೆ.

ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟದ ತುರ್ತು ಸಭೆ ಕರೆಯಲಾಗಿದೆ ಎಂಬುದು ಮತ್ತೊಂದು ಊಹಾಪೋಹ.
ಮತ್ತಷ್ಟು
ಸಾಂಕ್ರಾಮಿಕ ರೋಗಗಳ ತಡೆಗೆ ಸಿಬ್ಬಂದಿ ನೇಮಕ
ಮೈಸೂರಿಗೆ ಹೈಟೆಕ್ ಬಸ್‌
ಷರತ್ತನ್ನು ಉಲ್ಲಂಘಿಸಿದ ಮಿತ್ರಪಕ್ಷಗಳು
ಬಿಎಸ್ಪಿ ಪರವಾಗಿ ಸಿಂಧ್ಯ ಪ್ರಚಾರ
ಪರಾಮರ್ಶದ ನಂತರ ಅಧಿಕಾರ ಹಸ್ತಾಂತರ: ಕುಮಾರಸ್ವಾಮಿ
ರಾಜಕಾರಣದಲ್ಲಿ ಸಕ್ರಿಯ: ಕರುಣಾನಿಧಿ