ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಹತ್ವದ ಜೆಡಿಎಸ್ ಸಭೆ
ಸಮ್ಮಿಶ್ರ ಸರ್ಕಾರದ ಅಧಿಕಾರ ಹಸ್ತಾಂತರದ ದಿನಾಂಕ ಹತ್ತಿರುವಾಗುತ್ತಿರುವಾಗ ಮಂಗಳವಾರ ಜೆಡಿಎಸ್ ಮಹತ್ವದ ಸಭೆ ನಡೆದಿದೆ.

ಈ ಸಭೆಯಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರದ ಬಗ್ಗೆ ಗಹನವಾದ ಚರ್ಚೆ ನಡೆಯಲಿದೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬೇಕು ಎಂಬ ಒಂದು ಸಾಲಿನ ನಿರ್ಣಯ ಕೈಗೊಳ್ಳುವ ಸಂಭವವಿದೆ.

ಬಿಜೆಪಿಗೆ ಅಧಿಕಾರವನ್ನು ಹಸ್ತಾಂತರಗೊಳಿಸುವುದರಿಂದ ಜೆಡಿಎಸ್‌ಗೆ ಆಗುವ ಲಾಭ ನಷ್ಟಗಳೇನು ಎಂಬುದರ ಬಗ್ಗೆ ಸಭೆ ನಡೆಸಿದೆ. ಅಧಿಕಾರ ಹಸ್ತಾಂತರಗೊಳಿಸದೇ ಇದ್ದರೆ ಪಕ್ಷದ ವರ್ಚಸ್ಸು ಕುಗ್ಗುತ್ತದೆಯೇ ಇತ್ಯಾದಿ ಅಂಶಗಳ ಬಗ್ಗೆ ಸಭೆ ಚರ್ಚಿಸಲಿದೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಹಿರಿಯ ಸಚಿವ ಎಂ.ಪಿ.ಪ್ರಕಾಶ್, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಚಿವರು ಹಾಗೂ ಶಾಸಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅಧಿಕಾರ ಹಸ್ತಾಂತರ ಕುರಿತಂತೆ ಈ ಸಭೆಯಲ್ಲಿ ಚರ್ಚೆ ನಡೆಸುವ ಅಂಶ ಅಜೆಂಡಾದಲ್ಲಿ ಇಲ್ಲ ಎಂದು ಪಕ್ಷದ ವಕ್ತಾರ ವೈಎಸ್ವಿ ದತ್ತಾ ತಿಳಿಸಿದ್ದಾರೆ.

ಅನೌಪಚಾರಿಕವಾಗಿ ಚರ್ಚೆ ನಡೆದರೂ ನಡೆಯಬಹುದು ಎಂದು ಅಡ್ಡಗೋಡೆಯಮೆಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಮುಖ್ಯಮಂತ್ರಿ ರಾಜೀನಾಮೆ ನಿರ್ಧಾರವನ್ನು ಪಕ್ಷದ ವರಿಷ್ಠರೇ ತೆಗೆದುಕೊಳ್ಳಬೇಕು ಎಂದು ಸಚಿವ ಚೆನ್ನಿಗಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಸಿಎಂ ರಾಜೀನಾಮೆ ವದಂತಿ ?
ಸಾಂಕ್ರಾಮಿಕ ರೋಗಗಳ ತಡೆಗೆ ಸಿಬ್ಬಂದಿ ನೇಮಕ
ಮೈಸೂರಿಗೆ ಹೈಟೆಕ್ ಬಸ್‌
ಷರತ್ತನ್ನು ಉಲ್ಲಂಘಿಸಿದ ಮಿತ್ರಪಕ್ಷಗಳು
ಬಿಎಸ್ಪಿ ಪರವಾಗಿ ಸಿಂಧ್ಯ ಪ್ರಚಾರ
ಪರಾಮರ್ಶದ ನಂತರ ಅಧಿಕಾರ ಹಸ್ತಾಂತರ: ಕುಮಾರಸ್ವಾಮಿ