ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಗೃಹ ಸಚಿವರೊಂದಿಗೆ ಕರುಣಾ ಮಾತುಕತೆ
ಹೊಸೂರು ರಸ್ತೆಯಲ್ಲಿ ದುಷ್ಕ್ರಮಿಗಳಿಂದ ಬೆಂಕಿಗೆ ಆಹುತಿಯಾದ ತಮಿಳುನಾಡು ಬಸ್ ಮತ್ತು ಮೂವರು ಪ್ರಯಾಣಿಕರ ಸಾವಿನ ಘಟನೆ ಕುರಿತಂತೆ ಮುಖ್ಯಮಂತ್ರಿ ಎಂ.ಕರುಣಾನಿಧಿಯವರೊಂದಿಗೆ ಗೃಹ ಸಚಿವ ಎಂಪಿ ಪ್ರಕಾಶ್ ಮಾತು ಕತೆ ನಡೆಸಿದ್ದಾರೆ.

ನಿನ್ನೆ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಒಂದು ಮಗು ಸೇರಿ ಮೂವರು ಸಾವನ್ನಪ್ಪಿದ್ದಾರೆ.

ಮೂವರು ವ್ಯಕ್ತಿಗಳು ಬಸ್‌ನ್ನು ತಡೆದು ಬೆಂಕಿ ಹಚ್ಚಿದ್ದಾಗಿ ಬಸ್ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ. ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಶ್ರೀರಾಮನ ಬಗ್ಗೆ ನೀಡಿರುವ ಹೇಳಿಕೆಗೆ ರೊಚ್ಚಿಗೆದ್ದ ವ್ಯಕ್ತಿಗಳು ಈ ದುಷ್ಕ್ಕತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಚಾಲಕನ ಹೇಳಿಕೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ದುರ್ಘಟನೆಗೆ ಕಾರಣರಾದವರು ಯಾವ ಸಂಘಟನೆಗೆ ಸೇರಿದವರಾದರೂ, ಎಷ್ಟೇ ದೊಡ್ಡವರಾದರೂ ಕಠಿಣ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂದು ಗೃಹ ಸಚಿವ ಎಂ.ಪಿ.ಪ್ರಕಾಶ್ ಎಚ್ಚರಿಸಿದ್ದಾರೆ. ಈ ವಿಷಯದ ಸಂಬಂಧ ತಾವು ಕೇಂದ್ರ ಗೃಹಸಚಿವರ ಜೊತೆ ಈ ಘಟನೆ ಬಗ್ಗೆ ಮಾತನಾಡಿದ್ದಾಗಿ ಅವರು ತಿಳಿಸಿದ್ದಾರೆ.

ತಮಿಳರು ಹಾಗೂ ಕನ್ನಡಿಗರ ನಡುವಣ ಸೌಹಾರ್ದ ಸಂಬಂಧಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ತಮಿಳುನಾಡಿನಿಂದ ಬೆಂಗಳೂರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಯಾವುದೇ ವಿಷಯದ ಬಗ್ಗೆ ಪ್ರತಿಭಟನೆ ನಡೆಸಬೇಕಾದರೆ ಶಾಂತಿಯುತವಾಗಿ ವರ್ತಿಸಬೇಕೇ ಹೊರತು ಈ ರೀತಿ ದುಷ್ಕ್ಕತ್ಯಗಳಿಗೆ ಮುಂದಾಗಬಾರದು ಎಂದು ಉಪ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಕೆಲವರು ಬಳಸಿಕೊಂಡ ಕಿಡಿಗೇಡಿಗಳ ಕೃತ್ಯ ಇದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮತ್ತಷ್ಟು
ಕರುಣಾ ಪುತ್ರಿ ಮನೆಗೆ ದಾಳಿ,ಮೂವರ ಸಾವು, ಬಸ್ಸಿಗೆ ಬೆಂಕಿ
ಸ್ಥಳೀಯ ಸಂಸ್ಥೆಗಳ ಚುನಾವಣೆ: ನಾಮಪತ್ರ ಪರೀಶೀಲನೆ
ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ
ಕಲಾವಿದರ ಹುಟ್ಟುಹಬ್ಬದ ಸಂಭ್ರಮ
ಮಹತ್ವದ ಜೆಡಿಎಸ್ ಸಭೆ
ಸಿಎಂ ರಾಜೀನಾಮೆ ವದಂತಿ ?