ಶ್ರೀರಾಮನನ್ನು ಟೀಕಿಸಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರಿಯ ಬೆಂಗಳೂರಿನ ಮನೆಯ ಮೇಲೆ ಗೊಂಪೊಂದು ಮಂಗಳವಾರ ರಾತ್ರಿ ಕಲ್ಲು ತೂರಾಟ ನಡೆಸಿ, ಪೆಟ್ರೋಲ್ ತುಂಬಿರುವ ಬಾಟಲಿಗಳನ್ನು ಎಸೆದು ದಾಂಧಲೆ ನಡೆಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಜಯನಗರದ 9ನೇ ಬ್ಲಾಕ್ ಸೌತ್ ಎಂಡ್ ಸಿಕ್ರಾಸ್ ಬಳಿ ಇರುವ ಮನೆಗೆ ಮಂಗಳವಾರ ಸಂಜೆ 7.45ರ ಸುಮಾರಿಗೆ 15 ಮಂದಿ ಇರುವ ಗುಂಪೊಂದು ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಾ ಕಲ್ಲು ತೂರಿ ಪೆಟ್ರೋಲ್ ತುಂಬಿದ್ದ ಬಾಟಲಿಗಳನ್ನು ಮನೆಮೇಲೆ ಎಸೆಯಿತು.
ಆ ಸಮಯದಲ್ಲಿ ಮನೆ ಕಾವಲುಗಾರ ಮತ್ತು ಕೆಲಸದವಳು ಬಿಟ್ಟು ಯಾರೂ ಇರಲಿಲ್ಲ. ಮನೆಯ ಕಿಟಕಿ ಗಾಜುಗಳು ಧ್ವಂಸಗೊಂಡಿವೆ. ಕಾವಲುಗಾರನಿಗೆ ಗಾಯಗಳಾಗಿವೆ. ಇಬ್ಬರು ಪೊಲೀಸರನ್ನು ಮನೆ ಬಳಿ ನೇಮಿಸಿದ್ದಾಗಿ ಡಿಸಿಪಿ (ದಕ್ಷಿಣ) ಅಲೋಕ್‌ಕುಮಾರ್ ತಿಳಿಸಿದ್ದಾರೆ.
|