ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತ ಕ್ರಮಕ್ಕೆ ಕೊನೆಗೂ ಸರ್ಕಾರ ಲೋಕಾಯುಕ್ತರಿಗೆ ಅಧಿಕಾರ ನೀಡಿದೆ. ಇದರಿಂದ ಬಹುದಿನಗಳ ಬೇಡಿಕೆ ಭಾಗಶಃ ಈಡೇರಿದಂತಾಗಿದೆ.
ಮಂಗಳವಾರ ನಡೆದ ತುರ್ತು ಸಚಿವ ಸಂಪುಟ ಸಭೆ ಲೋಕಾಯುಕ್ತರಿಗೆ ಸ್ವಯಮಾಧಿಕಾರ ನೀಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಅನುಮೋದನೆ ನೀಡಿದೆ.
ಇದರೊಂದಿಗೆ ಲೋಕಾಯುಕ್ತರು ಐಎಎಸ್, ಐಪಿಎಸ್, ಯೆಫ್ಎಸ್ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವ ಅಧಿಕಾರ ನೀಡಿದಂತಾಗಿದೆ.
ಆದರೆ ಶಾಸಕರು, ಮತ್ತು ಸಚಿವರು ಸ್ಬೆರಿದಂತೆ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಲೋಕಾಯುಕ್ತರಿಗೆ ನೀಡಿಲ್ಲ. ತಪ್ಪಿತಸ್ಥರೆಂದು ಕಂಡುಬಂದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗಳ್ಳುವ ಅಧಿಕಾರ ನೀಡಲು ಸರ್ಕಾರ ನಿರಾಕರಿಸಿದೆ. 10,500 ರೂ. ಹೆಚ್ಚು ವೇತನ ಪಡೆಯುವ ಅಧಿಕಾರಿಗಳ ವಿರುದ್ಧ ಯಾವುದೇ ದುರು (ಫೋನ್, ಮಾಧ್ಯಮ, ಲಿಖಿತ) ಬಂದರೂ ಲೋಕಾಯುಕ್ತರು ಇನ್ನು ಸ್ವಯಂಪ್ರೇರಿತರಾಗಿ ವಿಚ್ಫರಣೆ ಅಥವಾ ತನಿಖೆಗೆ ಮುಂದಾಗಬಹುದು.
ಅದಕ್ಕಿಂತ ಕಡಿಮೆ ವೇತನ ಪಡೆಯುವ ಅಧಿಕಾರಿ ಅಥವಾ ಸರ್ಕಾರಿ ನೌಕರರ ವಿರುದ್ಧ ಉಪ ಲೋಕಾಯುಕ್ತರು ಸ್ವಯಂ ಪ್ರೇರಿತ ತನಿಖೆ ಕೈಗೊಳ್ಳಬಹುದು.
ಇದುವರೆಗೆ ಲೋಕಾಯುಕ್ತ ಸಂಸ್ಥೆಗೆ ಹಾಜರಾಗಿ ದೂರು ನೀಡಿದಾಗ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವ ಅಧಿಕಾರವಿತ್ತು.
|