ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಮಂಗಳವಾರ ಹಬ್ಬಿದ್ದ ವದಂತಿ ರಾತ್ರಿ ಸುಳ್ಳಾಯಿತು.
ಚರ್ಚೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮೀಸಲಾಯಿತು.ಟಿ.ವಿ ಚಾನಲ್‌ಗಳಲ್ಲಿ ರಾಜೀನಾಮೆ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಸಾರ್ವಜನಿಕರಲ್ಲಿ ಕೌತುಕಮಯ ಪ್ರಶ್ನೆಗಳು ಮೂಡಿಬಂದವು. ಈ ವದಂತಿ ಹಬ್ಬಿದ್ದರೂ ಕುಮಾರಸ್ವಾಮಿ ಅವರು ಯಾವುದೇ ದುಗುಡ, ಆತಂಕಕ್ಕೆ ಒಳಗಾಗದೇ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದರು.
ಈ ಬಗ್ಗೆ ಕುಮಾರಸ್ವಾಮಿಯವರೇ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದರು. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಈ ತಿಂಗಳ 28ರ ವರೆಗೆ ಯಾವುದೇ ನಿರ್ಣಯ ತೆಗೆದುಕೊಳ್ಳವುದಿಲ್ಲ, ಆ ಬಳಿಕ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
|