ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಹಿಂದೂ ನಂಬಿಕೆಗಳಿಗೆ ಕರುಣಾ ಕೊಡಲಿ ಪೆಟ್ಟು
ಬಹುಸಂಖ್ಯಾತ ಹಿಂದು ಸಮುದಾಯದ ನಂಬಿಕೆಗಳಿಗೆ ವಿರುದ್ಧವಾಗಿ ಮಾತನಾಡಿ ಕರುಣಾನಿಧಿ ಹಿಂದುಗಳು ಮನಸ್ಸಿಗೆ ನೋವುಂಟುಮಾಡಿ ಕೊಡಲಿಪೆಟ್ಟು ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ತಮಿಳುನಾಡು ಬಸ್‌ಗೆ ಬೆಂಗಳೂರಿನ ಬೊಮ್ಮನಹಳ್ಳಿ ಬಳಿ ಬೆಂಕಿ ಹಚ್ಚಿದ ಘಟನೆ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಮಗಳು ಸೆಲ್ವಿ ಅವರ ಮನೆಮೇಲೆ ದಾಳಿ ನಡೆಸಿದ ಪ್ರಕರಣಗಳ ಸಂಬಂಧ ನಗರ ಪೊಲೀಸರು 22 ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಂಗಳವಾರ ರಾತ್ರಿಯಿಂದ ಸ್ಥಗಿತಗೊಂಡಿದ್ದ ಕರ್ನಾಟಕಕ್ಕೆ ಬರುವ ತಮಿಳುನಾಡು ಬಸ್ಗಳ ಸಂಚಾರ ಪುನಾರಂಭಗೊಂಡಿದೆ.

ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಬಾರದಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಂಘ ಪರಿವಾರದ ಜನರು ಎಂದು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ, ಅವರದ್ದು ಎಂದಿಗೂ ಶಾಂತಿಯುತ ಪ್ರತಿಭಟನೆ ಎಂದು ಹೇಳಿದ್ದಾರೆ.
ಮತ್ತಷ್ಟು
ಅತಿವೃಷ್ಟಿ: ಮುಖ್ಯಮಂತ್ರಿಗಳಿಂದ ವೈಮಾನಿಕ ಸಮೀಕ್ಷೆ
ಶಿಕ್ಷಕನ ಕುಟುಂಬದ ನಾಲ್ವರ ಆತ್ಮಹತ್ಯೆ
ವರುಣನ ಅರ್ಭಟ: 7 ಮಂದಿ ಸಾವು
ನಗರಸಭೆ ಚುನಾವಣೆ: ಜೆಡಿಎಸ್ ಸಭೆ
ಸಿಎಂ ರಾಜೀನಾಮೆ ವದಂತಿಗೆ ತೆರೆ
ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧೀವೇಶನ