ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನವೇ ಅಧಿಕಾರ ಹಸ್ತಾಂತರದ ಬಗ್ಗೆ ಜೆಡಿಎಸ್ ಅಂತಿಮ ನಿರ್ಧಾರ ಕೈಗೊಂಡರೂ ಆ ಕುರಿತ ಪ್ರಕಟಣೆ ಮಾತ್ರ ಅಕ್ಟೋಬರ್ 3 ರಂದು ಹೊರಬೀಳಲಿದೆ ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಹಸ್ತಾಂತರ ವಿಚಾರದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಅವರು ಇಂಥ ಹೇಳಿಕೆಗಳಿಗೆ ಸ್ವಯಂ ಕಡಿವಾಣ ಹಾಕಬೇಕೆಂಬ ತಮ್ಮ ಪಕ್ಷದ ವರಿಷ್ಠರ ನಿರ್ದೇಶನದಂತೆ ಸ್ವಲ್ಪ ಮಟ್ಟಿಗೆ ಮೆದು ಧೋರಣೆ ಅನುಸರಿಸುತ್ತಿರುವುದಾಗಿ ತಿಳಿಸಿದ್ದಾರೆ. ಚುನಾವಣೆಗೂ ಅದರ ಫಲಿತಾಂಶಕ್ಕೂ ಅಧಿಕಾರ ಹಸ್ತಾಂತರಕ್ಕೂ ಸಂಬಂಧವಿಲ್ಲ, ಶಾಸಕರು ಅಧಿಕಾರ ಹಸ್ತಾಂತರ ಅಂಶವನ್ನು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
|