ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ: ಚಿಂತನೆ
ಈಗಾಗಲೇ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಿರುವ ಸರ್ಕಾರ ತಪ್ಪಿತಸ್ಥ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನೀಡಲು ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈವರೆಗೆ ಯಾವ ಸರ್ಕಾರವೂ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಿರಲಿಲ್ಲ.

ತಮ್ಮ ಸರ್ಕಾರ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಜನಪ್ರತಿನಿಧಿಗಳನ್ನು ಲೋಕಾಯುಕ್ತರ ವ್ಯಾಪ್ತಿಗೆ ತರಲು ತಮಗೆ ಹಿಂಜರಿಕೆ ಏನಿಲ್ಲ, ಆದರೆ ಅದಕ್ಕೆ ಕೆಲ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಿದ ನಂತರ ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಧರಂಸಿಂಗ್ ವಿರುದ್ಧ ಕಿಡಿ: ರಾಜಕೀಯದಲ್ಲಿ ಅಪಾರ ಅನುಭವ ಇರುವ ವಿರೋಧ ಪಕ್ಷದ ನಾಯಕ ಧರಂಸಿಂಗ್ ಯುವ ರಾಜಕಾರಣಿ ಯಾದ ತಮಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಭಾವಿಸಲಾಗಿತ್ತು.ಆದರೆ ಅವರು ತಮ್ಮನ್ನು ಟೀಕಿಸುವುದು ಬಿಟ್ಟು ಬೇರೇ ಏನೂ ಮಾಡುತ್ತಿಲ್ಲ ಎಂದು ಹೇಳಿದರು.
ಮತ್ತಷ್ಟು
ಅಧಿಕಾರ ಹಸ್ತಾಂತರ:ಸೂಕ್ತ ನಿರ್ಧಾರ
ನಟ ದೇವರಾಜ್ ಹುಟ್ಟು ಹಬ್ಬ
ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ಹಿಂದೂ ನಂಬಿಕೆಗಳಿಗೆ ಕರುಣಾ ಕೊಡಲಿ ಪೆಟ್ಟು
ಅತಿವೃಷ್ಟಿ: ಮುಖ್ಯಮಂತ್ರಿಗಳಿಂದ ವೈಮಾನಿಕ ಸಮೀಕ್ಷೆ
ಶಿಕ್ಷಕನ ಕುಟುಂಬದ ನಾಲ್ವರ ಆತ್ಮಹತ್ಯೆ