ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿ ವಿರುದ್ಧ ಸಿಎಂ ಟೀಕೆ
ಗ್ರಾಮೀಣ ಪ್ರದೇಶಗಳಲ್ಲಿ ಮುರಿದಿರುವ ಸೇತುವೆಗಳನ್ನು ಕಟ್ಟಲಾರದ ಬಿಜೆಪಿ ರಾಮಸೇತು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ ಎಂದು ಹೇಳುವ ಮೂಲಕ ಸಮ್ಮಿಶ್ರ ಸರ್ಕಾರದ ಅಂಗಪಕ್ಷವನ್ನೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಸ್ಥಳೀಯ ಸಂಸ್ಥೆಗಳು ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಜಾತಿ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಮತ ನೀಡಿದರೆ ಮುಂದೆ ರಾಜ್ಯದ ಜನತೆ ಕರಾಳ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮ ಮತ್ತು ಧರ್ಮದ ಹೆಸರಲ್ಲಿ ಮುಗ್ಧ ಜನರನ್ನು ಭಾವನಾತ್ಮಕವಾಗಿ ಗುಂಪು ಕಟ್ಟಿಸುವ ಪಕ್ಷದಿಂದ ಜೆಡಿಎಸ್ ಕಾರ್ಯಕರ್ತರು ದೂರವಿರಬೇಕೆಂದು ಸಲಹೆ ನೀಡಿದ್ದಾರೆ.

ಶಿವಮೊಗ್ಗದ ಅಭಿವೃದ್ದಿಗೆ ಯಾವ ಒಬ್ಬ ವ್ಯಕ್ತಿ ಕಾರಣ ಅಲ್ಲ ಎನ್ನುವ ಮೂಲಕ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿತವಾಗುತ್ತಿರುವ ಉಪ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಮತ್ತಷ್ಟು
ಜೆಡಿಎಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಬಿಎಂಐಸಿಗೆ ಜಾಗತಿಕ ಟೆಂಡರ್: ಧರಂಸಿಂಗ್ ಟೀಕೆ
ಅತಿವೃಷ್ಟಿ: ಕಾಂಗ್ರೆಸ್ ಮುಖಂಡರ ಸಮೀಕ್ಷೆ
ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ: ಚಿಂತನೆ
ಅಧಿಕಾರ ಹಸ್ತಾಂತರ:ಸೂಕ್ತ ನಿರ್ಧಾರ
ನಟ ದೇವರಾಜ್ ಹುಟ್ಟು ಹಬ್ಬ