ಒಡೆದ ಕುಟುಂಬಗಳನ್ನು ಒಂದು ಮಾಡುವ, ವಿಚ್ಛೇದನಕ್ಕೆ ಮುಂದಾಗುವ ದಂಪತಿಯನ್ನು ಸರಿ ಹಾದಿಯಲ್ಲಿ ನಡೆಸುವ ಮತ್ತು ಇತರ ವಿವಾದಗಳನ್ನು ಬಗೆಹರಿಸುವ ಕಾರ್ಯದಲ್ಲಿ ನಿರತವಾಗಿರುವ ಧರ್ಮಸ್ಥಳದ ಹಾದಿಯಲ್ಲಿ ಉಡುಪಿ ಶ್ರೀಕೃಷ್ಣ ದೇವಾಲಯ ಸಾಗಿದೆ.
ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಶ್ರೀಕೃಷ್ಣ ನ್ಯಾಯಾಲಯ ಅಸ್ತಿತ್ವಕ್ಕೆ ಬರಲಿದೆ.
ಅಷ್ಟ ಮಠಗಳ ಪೈಕಿ ಒಂದಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರಿಗೆ ಇಂಥ ಪರಿಕಲ್ಪನೆ ಹೊಳೆದಿದೆ.
ಆಧುನೀಕರಣ ಬಿರುಗಾಳಿಗೆ ರಾಷ್ಟ್ತ್ರದಲ್ಲಿ ಕುಟುಂಬ ವ್ಯವಸ್ಥೆಯೇ ಅಲುಗಾಡುತ್ತರುವ ಪ್ರಸಕ್ತ ಸನ್ನಿವೇಶದಲ್ಲಿ ಇಂಥ ಪ್ರಯತ್ನಕ್ಕೆ ಶ್ರೀಗಳು ಮುಂದಾಗಿದ್ದಾರೆ.
ಉದ್ದೇಶಿತ ನ್ಯಾಯಾಲಯದ ರೂಪುರೇಶೆ ಬಹುತೇಕ ರೂಪುಗೊಂಡಿದೆ. ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ವಾದಿ-ಪ್ರತಿವಾದಿಗಳ ಮಧ್ಯೆ ಸಂಧಾನ ನಡೆಸಲಾಗುತ್ತದೆ.
ನ್ಯಾಯೋಚಿತ ತೀರ್ಪನ್ನು ದೇಗುಲ ಮಂಡಳಿ ನೀಡಲಿದೆ. ನಂತರ ಶ್ರೀಕೃಷ್ಣನ ಎದುರು ಇಬ್ಬರಿಗೂ ಪ್ರಮಾಣ ಮಾಡಿಸಲಾಗುವುದು.
|