ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಎರಡು ಪಕ್ಷಗಳೂ ಬಿಜೆಪಿಯನ್ನು ದ್ವೇಷಿಸುತ್ತಿದ್ದವು. ಈಗ ಜೆಡಿಎಸ್‌ಗೆ ಕಾಂಗ್ರೆಸ್ ಬೇಡವಾಗಿದೆ.
ಈಗ ಸಖ್ಯದಿಂದ ಸರ್ಕಾರ ನಡೆಸುತ್ತಿರುವ ಎರಡು ಪಕ್ಷಗಳು ದೂರವಾಗುವ ಕಾಲವೂ ಸನ್ನಿಹಿತವಾಗಿದೆ.
ರಾಜಕೀಯದಲ್ಲಿ ಯಾರೂ ಕಾಯಂ ದೊಸ್ತಿಗಳೂ ಅಲ್ಲ; ಯಾರೂ ಕಾಯಂ ಶತ್ರುಗಳೂ ಅಲ್ಲ ಎನ್ನುವ ಮಾತಿಗೆ ಪುಷ್ಟಿ ನೀಡುವಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿವೆ.
ಈ ತಿಂಗಳು 28ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದು ಕಳೆದ ಆರು ದಶಕಗಳಿಂದ ಮುಂದುವರೆಯುತ್ತಿರುವ ಮಹಾರಾಷ್ಟ್ತ್ರ ಏಕೀಕರಣ ಸಮಿತಿ ಪುಂಡಾಟಿಕೆಯನ್ನು ಮಟ್ಟ ಹಾಕಲು ಸಜ್ಜಾಗಿವೆ.
ಕನ್ನಡಪರ ಸಂಘಟನೆಗಳು ಮಾಡಿದ ಯತ್ನಕ್ಕೆ ರಾಜಕೀಯ ಪಕ್ಷಗಳು ಸಹಕರಿಸಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ಬೆಳಗಾವಿ ಮಹಾನಗರ ಪಾಲಿಕೆಯ 44 ವಾರ್ಡ್‌ಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಪ್ರಕ್ರಿಯೆ ಮುಂದುವರೆದಿದೆ.
|