ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕ್ರೈಸ್ತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಪ್ರತಿಭಟನೆ
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದನಂತರ ಕ್ರೈಸ್ತರಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚುತ್ತಿದೆ ಎಂಬ ಆರೋಪದೊಂದಿಗೆ ಹಲವಾರು ಕ್ರೈಸ್ತ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿವೆ.

ಸಂಸದ ಎಚ್.ಟಿ. ಸಾಂಗ್ಲಿಯಾನಾ ಅವರ ನೇತೃತ್ವದಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿದ ನಂತರ ಕ್ರೈಸ್ತ ಮುಖಂಡರ ನಿಯೋಗ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಭೇಟಿ ಮಾಡಿ ಮನವಿಸಲ್ಲಿಸಲಾಯಿತು.

ಪ್ರತಿ ರಾಲಿ

ಜವಾಬ್ದಾರಿ ಸ್ಥಾನದಲ್ಲಿರುವ ಎಚ್.ಟಿ.ಸಾಂಗ್ಲಿಯಾನಾ ಅವರು ರಾಲಿ ನಡೆಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಟೀಕಿಸಿದ್ದಾರೆ.

ಕ್ರೈಸ್ತರ ಪ್ರತಿಭಟನೆ ವಿರೋಧಿಸಿ ಎಂ.ಜಿ.ರಸ್ತೆಯ ಮಹಾತ್ಮಾಗಾಂದಿ ಪ್ರತಿಮೆ ಎದುರು ಹಿಂದು ಜಾಗರಣಾ ವೇದಿಕೆ ಪ್ರತಿಭಟನೆ ನಡೆಸಿದೆ.

ಮತ ಪ್ರಚಾರದ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹಿಂದುಗಳ ಮನೆ ಬಾಗಿಲಲ್ಲಿ ಕ್ರೈಸ್ತ ಮತ ಪ್ರಚಾರಕರು ನಿರಂತರವಾಗಿ ಹಿಂದು ದೇವರನ್ನು ಖಂಡಿಸಿ, ನಿಂದಿಸುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮತ್ತಷ್ಟು
ಗಣಪತಿ ವಿಸರ್ಜನೆ: ಗಾಳಿಯಲ್ಲಿ ಗುಂಡು
ಅಧಿಕಾರ ಹಸ್ತಾಂತರ ಸುಗಮ: ವೆಂಕಯ್ಯನಾಯ್ಡು
ತಮಿಳುನಾಡು ಬಸ್‌ಗೆ ಬೆಂಕಿ: 13 ಬಂಧನ
ಕುತೂಹಲ ಕೆರಳಿಸುತ್ತಿರುವ ಅಧಿಕಾರ ಹಸ್ತಾಂತರ
ದಸರಾ ಉತ್ಸವ:ಡ್ರೀಮ್‌ಗರ್ಲ್‌ನಿಂದ ಭರತನಾಟ್ಯ
ಬೆಳಗಾವಿ: ಜೆಡಿಎಸ್‌ಗೆ ಕಾಂಗ್ರೆಸ್ ಶತ್ರು