ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸ್ಥಳೀಯ ಚುನಾವಣೆ: ಬಿರುಸಿನ ಪ್ರಚಾರ
ಸ್ಥಳೀಯ ಸಂಸ್ಥೆಗಳು ಚುನಾವಣೆಯಲ್ಲಿ ಹೇಗಾದರೂ ಮಾಡಿ ಹೆಚ್ಚೆಚ್ಚು ಸ್ಥಾನಗಳನ್ನು ಜಯಗಳಿಸುವ ಪಣ ತೊಟ್ಟಿರುವ ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ.

ಬಿಜೆಪಿ ಶನಿವಾರ ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಮಾಡಿದೆ.

ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರೆ ಈ ತಿಂಗಳ 28ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಎರಡು ದಿನ ಮುಂಚೆಯೇ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಕಟ್ಟಾಜ್ಞೆ ಹೊರಡಿಸಿದೆ.

ಪ್ರಚಾರ ಕಾರ್ಯಕ್ಕೆ 26ರ ಬೆಳಗ್ಗೆ 7 ಗಂಟೆಯೊಳಗೆ ಇತಿಶ್ರೀ ಹಾಡಬೇಕು ಎಂದು ತಾಕೀತು ಮಾಡಿದೆ. ಈ ಅವಧಿನಂತರ ಸಾರ್ವಜನಿಕ ಪ್ರಚಾರ ಸಭೆಗಳು, ಮೆರವಣಿಗೆ ಸೇರಿದಂತೆ ಇನ್ನಿತರ ವಿಧದ ಪ್ರಚಾರಗಳನ್ನು ನಿಷೇಧಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣಾ ನಾಮಪತ್ರ ವಾಪಸ್ ಪಡೆಯುವ ದಿನಾಂಕದ ನಂತರ 18,195 ಅಭ್ಯರ್ಥಿಗಳು ಇದ್ದಾರೆ.

ಅವಿರೋಧವಾಗಿ 85 ಮಂದಿ ಆಯ್ಕೆ ಯಾಗಿದ್ದು, ಈ ಪೈಕಿ ಬಿಜೆಪಿ 3, ಜೆಡಿಎಸ್ 17, ಕಾಂಗ್ರೆಸ್ 22 ಮತ್ತು ಇತರೆ 43 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಮತದಾನಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಖಾಸಗಿ ಕಚೇರಿಗಳು, ನಿಗಮ ಮಂಡಳಿಗಳು, ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಆದರೆ ಅಗತ್ಯ ಸೇವೆ ಮತ್ತು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ರಜೆಯಿಲ್ಲ.
ಮತ್ತಷ್ಟು
ಕ್ರೈಸ್ತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಪ್ರತಿಭಟನೆ
ಗಣಪತಿ ವಿಸರ್ಜನೆ: ಗಾಳಿಯಲ್ಲಿ ಗುಂಡು
ಅಧಿಕಾರ ಹಸ್ತಾಂತರ ಸುಗಮ: ವೆಂಕಯ್ಯನಾಯ್ಡು
ತಮಿಳುನಾಡು ಬಸ್‌ಗೆ ಬೆಂಕಿ: 13 ಬಂಧನ
ಕುತೂಹಲ ಕೆರಳಿಸುತ್ತಿರುವ ಅಧಿಕಾರ ಹಸ್ತಾಂತರ
ದಸರಾ ಉತ್ಸವ:ಡ್ರೀಮ್‌ಗರ್ಲ್‌ನಿಂದ ಭರತನಾಟ್ಯ